Select Page

Advertisement

ಹೆತ್ತ ಮಗನನ್ನೇ ಕೊಲ್ಲಿಸಿದ ತಂದೆ : ಚೀಟಿಯಿಂದ ಹೊರಬಿದ್ದ ಮರ್ಡರ್ ಹಿಸ್ಟರಿ

ಹೆತ್ತ ಮಗನನ್ನೇ ಕೊಲ್ಲಿಸಿದ ತಂದೆ : ಚೀಟಿಯಿಂದ ಹೊರಬಿದ್ದ ಮರ್ಡರ್ ಹಿಸ್ಟರಿ

ಬೆಳಗಾವಿ : ಸರಾಯಿ ಕುಡಿಯುವುದನ್ನು ಬಿಡುವಂತೆ ಮನೆಯವರು ಬುದ್ಧಿವಾದ ಹೇಳಿದರೂ ಕುಡಿತದ ಚಟಕ್ಕೆ‌ ಬಿದ್ದ ಮಗನಿಗೆ ತಂದೆಯೇ ಮಾರ್ಗದರ್ಶನ ಮಾಡಿ ಕೊಲೆ ಮಾಡಿಸಿದ ಘಟನೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಟರನಟ್ಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (39) ಕೊಲೆಯಾದ ದುರ್ದೈವಿ. ಮಹೇಶ ಜೊತೆಗೆ ಉಳ್ಳಾಗಡ್ಡಿ ವ್ಯಾಪಾರ ಮಾಡುತ್ತಿದ್ದ ಯರಗಟ್ಟಿ ತಾಲೂಕಿನ ಮಂಜುನಾಥ ಶೇಖಪ್ಪ ಹೊಂಗಲ (43),  ಕೊಲೆ ಮಾಡಲು ಸಹಾಯ ಮಾಡಿದ ಯರಗಟ್ಟಿ ತಾಲೂಕಿನ ಅಡಿವೆಪ್ಪ ಅಜ್ಜಪ್ಪ ಬೊಳೇತ್ತಿನ( 38) ಆರೋಪಿಗಳನ್ನು ಮುರುಗೋಡ ಪೊಲೀಸರು ಬಂಧಿಸಿದ್ದಾರೆ.

ಸಂಗಮೇಶನನ್ನು ಬೈಲಹೊಂಗಲ ಸರಾಯಿ ಅಂಗಡಿಯಲ್ಲಿ ಕಂಠಪೂರ್ತಿ ಕುಡಿಸಿದ ಆರೋಪಿ ಮಂಜುನಾಥ ಸಂಗಮೇಶನನ್ನು ಬೈಕ್ ಮೇಲೆ ಅಡಿವೆಪ್ಪನ ಸಹಾಯದಿಂದ ಕುಟರನಟ್ಟಿಗೆ ಕರೆದುಕೊಂಡು‌ ಹೋಗಿ‌ ನಿರ್ಜನ ಪ್ರದೇಶದಲ್ಲಿ ಕಲ್ಲು ಎತ್ತಿ ಹತ್ಯೆ ಮಾಡಿ ಯಾರಿಗೂ ಸುಳಿವು ಸಿಗದಂತೆ ಪರಾರಿಯಾಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಳಿವು ಸಿಕ್ಕ ಸುಣ್ಣದ ಡಬ್ಬಿ, ಮೊಬೈಲ್ ನಂಬರ್ ಚೀಟಿ:

ಕೊಲೆಯಾದ ಸಂಗಮೇಶ ಬೈಲಹೊಂಗಲ ಹಾಗೂ ಬೆಳಗಾವಿಯಲ್ಲಿ ಉಳ್ಳಾಗಡ್ಡಿ ವ್ಯಾಪಾರ ವಹಿವಾಟು ಮಾಡಿಕೊಂಡು ಬರುತ್ತಿದ್ದ. ಬಂದ ಲಾಭದಲ್ಲಿ ನಿತ್ಯ ಸರಾಯಿ ಕುಡಿಯುವುದೆ ಕಾಯಕ ಮಾಡಿಕೊಂಡು ಮನೆಯವರಿಗೂ ಭಾರವಾಗಿದ್ದ.

ಸರಾಯಿ ಬಿಡುವಂತೆ ಮನೆಯಲ್ಲಿ ಎಷ್ಟೆ ಬುದ್ಧಿವಾದ ಹೇಳಿದರೂ ಕುಡಿತ ಮುಂದುವರೆಸಿದ್ದ ತಂದೆಯ ಮಾರ್ಗದರ್ಶನದಲ್ಲಿ ಆತನೊಂದಿಗೆ ವ್ಯಾಪಾರ ವಹಿವಾಟು ಮಾಡುತ್ತಿದ್ದ ಮಂಜುನಾಥ ಆತನ ಸ್ನೇಹಿತ ಅಡಿವೆಪ್ಪನ ಸಹಾಯದಿಂದ ಗೋಕಾಕ ತಾಲೂಕಿನ ಅಂಕಲಗಿಯಲ್ಲಿ ಮೂವರು ಸರಾಯಿ ಕುಡಿದು ಕುಟರನಟ್ಟಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಸಂಗಮೇಶನ ತಲೆಯ ಮೇಲೆ ಕಲ್ಲು ಎತ್ತಿ ಕೊಲೆ ಮಾಡಿ ಪರಾರಿಯಾಗಿದ್ದರು.

ಆ.20 ರಂದು ಸುದ್ದಿ ತಿಳಿದ ಮುರುಗೋಡ ಪೊಲೀಸರು ಸ್ಥಳಕ್ಕೆ ಹೋದಾಗ ಹತ್ಯೆಯಾಗಿದ್ದ ಸಂಗಮೇಶನ ಜೇಬಿನಲ್ಲಿ ಸುಣ್ಣದ ಡಬ್ಬಿ ಹಾಗೂ ಆರೋಪಿ ಮಂಜುನಾಥ ಮೊಬೈಲ್ ನಂಬರ್ ಚೀಟಿ ಸಿಗುತ್ತದೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಳ್ಳಾಗಡ್ಡಿ ವ್ಯಾಪಾರಿಯ ಕೊಲೆಗೆ ಸಂಬಂದಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

– ಡಾ. ಸಂಜೀವ ಪಾಟೀಲ, ಎಸ್ಪಿ, ಬೆಳಗಾವಿ

Advertisement

Leave a reply

Your email address will not be published. Required fields are marked *

error: Content is protected !!