ಬೆಳಗಾವಿ : ಪೊಲೀಸರ ದಾಳಿ ; 200 ರೂಪಾಯಿ & ಕ್ವಾಟರ್ ಓರಿಜನಲ್ ಚಾಯ್ಸ್ ವಶ…!

ಬೆಳಗಾವಿ : ಅಕ್ರಮವಾಗಿ ಸರಾಯಿ ಮರಾಟ ಹಾಗೂ ಕುಡುಕರಿಗೆ ಎಣ್ಣೆ ಹೊಡೆಯಲು ಅವಕಾಶ ನೀಡಿದ್ದ ಆರೋಪದ ಮೇಲೆ ಹಿರೇಬಾಗೇವಾಡಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಆರೋಪಿಯಿಂದ 200 ರೂ. ಹಣ ಹಾಗೂ 180 , ಎಂಎಲ್. ಒರಿಜಿನಲ್ ಚಾಯ್ಸ್ ವಶಕ್ಕೆ ಪಡೆಯಲಾಗಿದೆ.
ಭೂಪಾಲ ದೇಸಾಯಿ ಎಂಬಾತ ಹಲಗಾ ಗ್ರಾಮದ ಸುವರ್ಣ ಪ್ಯಾಲೆಸ್ ಹತ್ತಿರದ ಹಿಂದಿನ ಖುಲ್ಲಾ ಜಾಗದಲ್ಲಿ ಹಿರೇಬಾಗೇವಾಡಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ವಿರುದ್ಧ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹಿರೇಬಾಗೇವಾಡಿ ಠಾಣೆ ಪಿಎಸ್ಐ ಅವಿನಾಶ್ ಯರಗೊಪ್ಪ ಅವರು ದಾಳಿಯ ನೇತೃತ್ವ ವಹಿಸಿದ್ದರು.

