Select Page

Advertisement

ಮೇಯರ್ ಸಭೆ ಮಹತ್ವ ಹಾಳು ಮಾಡುತ್ತಿದ್ದಾರಾ ಪಾಲಿಕೆ ಸದಸ್ಯರು..?

ಮೇಯರ್ ಸಭೆ ಮಹತ್ವ ಹಾಳು ಮಾಡುತ್ತಿದ್ದಾರಾ ಪಾಲಿಕೆ ಸದಸ್ಯರು..?

ಬೆಳಗಾವಿ ಮಹಾನಗರದ ಸಮಸ್ಯೆಯ ಕುರಿತು ಚರ್ಚೆ ನಡೆಸಬೇಕಿದ್ದ ಪಾಲಿಕೆಯ ಸರ್ವ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಅಧಿಕಾರಿಗಳ ಮೇಲೆ ಗುರಿ ಇಟ್ಟುಕೊಂಡು ಹೊಂದಾಣಿಕೆ ಮಾಡಿಕೊಂಡು ವಿನಾಕಾರಣ ಮೇಯರ್ ನೇತೃತ್ವದ ಮಹತ್ವದ ಸಭೆಯಲ್ಲಿ ಕಾಲಹರಣ ಮಾಡುತ್ತಿರುವುದು ನಗರ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಬೆಳಗಾವಿ ನಗರದಲ್ಲಿ ಸಮಸ್ಯೆಗಳೇ ಇಲ್ಲವಾ ? ಅಧಿಕಾರಿಗಳು ವರ್ಗಾವಣೆಯಾದರೆ ನಗರದ ಸಮಸ್ಯೆಗೆ ಮುಕ್ತಿ ಸಿಗುತ್ತದೆಯೇ? ತಮ್ಮ ವೈಯಕ್ತಿಕ ಲಾಭಕ್ಕಾಗಿ ಮೇಯರ್ ನೇತೃತ್ವದ ಸಭೆಯಲ್ಲಿ ಕಾಲಹರಣ ಮಾಡುತ್ತಿರುವ ನಗರ ಸದಸ್ಯರು ತಮ್ಮ ತಮ್ಮ ವಾಡ್೯ಗಳಲ್ಲಿನ ಸಮಸ್ಯೆಯ ಕುರಿತು ಚರ್ಚೆ ನಡೆಸಿ ಬೆಳಕು ಚೆಲ್ಲಲ್ಲಿ.

ಪಾಲಿಕೆಯ ಆಡಳಿತ ಪಕ್ಷ ವಿರೋಧ ಪಕ್ಷದವರು ಹೊಂದಾಣಿಕೆ ಮಾಡಿಕೊಂಡು ಅಧಿಕಾರಿಗಳ ವರ್ಗಾವಣೆಯ ಬಗ್ಗೆ ಗಂಟೆ ಗಂಟೆ ಚರ್ಚೆ ಮಾಡಿ ಸಭೆಯ ಮಹತ್ವ ಹಾಳು ಮಾಡುವುದು ಎಷ್ಟು ಸರಿ ಎನ್ನುವುದು ಎಲ್ಲ ಸದಸ್ಯರ ವಾಡ್೯ ಗಳ ಜನರ ಆಗ್ರಹವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!