ಅತ್ತಿಗೆಯ ಜೊತೆ ಸಲುಗೆಯಿಂದ ಮಾತು : ಗೆಳೆಯನ್ನೇ ಹತ್ಯೆಮಾಡಿದ ಯುವಕ
ಬೆಳಗಾವಿ : ಸ್ವಂತ ಅತ್ತಿಗೆಯ ಜೊತೆ ಸಲುಗೆಯಿಂದ ಫೋನ್ ನಲ್ಲಿ ಮಾತನಾಡುತ್ತಿದ್ದ ಕಾರಣ ಗೆಳೆಯನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಹೊರವಲಯದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಹುಲ್ಯಾನೂರ ಗ್ರಾಮದ ಅಭಿಷೇಕ ಬುಡ್ರಿ ( 19 ) ಎಂಬಾತನನ್ನು ಇದೇ ಗ್ರಾಮದ ಯುವಕ ಹುಲೆಪ್ಪ ಕರಿಕಟ್ಟಿ ಎಂಬಾತ ಭಾನುವಾರ ತಡರಾತ್ರಿ ಹೊಟ್ಟೆಗೆ ಚಾಕುವಿನಿಂದ ಇರುದು ಕೊಲೆ ಮಾಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರು ಚಿಕಿತ್ಸೆ ಫಲಕಾರಿಯಾಗದೆ ಸಾವಣಪ್ಪಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ಅಭಿಷೇಕ ಅದೇ ಗ್ರಾಮದ ಹುಲೆಪ್ಪ ಅವರ ಅತ್ತಿಗೆ ಜೊತೆ ಫೋನ್ ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದ. ಊ ಕುರಿತು ಅನೇಕ ಬಾರಿ ಹುಲೆಪ್ಪ ಎಚ್ಚರಿಕೆಯನ್ನು ಕೊಟ್ಟಿದ್ದ. ಆದರೆ ಅದೇ ಮುಂದಿವರಿದ ಹಿನ್ನಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


