ಜಲಪಾತದ ಕೆಳಗೆ ಸರ್ಕಾರಿ ಅಧಿಕಾರಿಗಳ ಎಣ್ಣೆ ಪಾರ್ಟಿ ; ಪ್ರಕರಣ ದಾಖಲು
ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ನಿಷೇಧಿತ ಅರಣ್ಯ ಪ್ರದೇಶದ ಬಟವಡೆ ಗ್ರಾಮದ ಹೊರವಲಯದಲ್ಲಿನ ಫಾಲ್ಸ್‌ನಲ್ಲಿ ಗುಂಡು, ತುಂಡು ಪಾರ್ಟಿ ಮಾಡಿದ ಘಟನೆಗೆ ಸಂಬಂಧಿಸಿದಂತೆ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾನುವಾರ ವಾರದ ರಜೆ ಇದ್ದ ಕಾರಣ ನಿಷೇಧಿತ ಅರಣ್ಯ ವ್ಯಾಪ್ತಿಯಲ್ಲಿ ಇರೋ ಫಾಲ್ಸ್‌ಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಫಾಲ್ಸ್ ಮುಂಭಾಗದಲ್ಲಿ ಗ್ಯಾಸ್ ಬಳಸಿ ಅಡುಗೆ ಮಾಡಿ ಎಣ್ಣೆ ಪಾರ್ಟಿ ಮಾಡಿ ಅರಣ್ಯ ಪ್ರದೇಶದಲ್ಲಿ ಹುಚ್ಚಾಟ ನಡೆಸಿರುವ ಹೆಸ್ಕಾಂ ಸಿಬ್ಬಂದಿ, ಖಾಸಗಿ, ಸರ್ಕಾರಿ ಆಸ್ಪತ್ರೆ ವೈದ್ಯರು ತಂಡ ಇತ್ತು ಎನ್ನಲಾಗಿದೆ, ಫಾಲ್ಸ್‌ಗೆ ಹೆಸ್ಕಾಂ ವಾಹನದಲ್ಲಿ ಬಂದು ಗುಂಡು, ತುಂಡು ಪಾರ್ಟಿ ಮಾಡಿದ್ದಾರೆ.
ಆದರೆ ಅರಣ್ಯ ಪ್ರದೇಶ ಫಾಲ್ಸ್‌ಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಪಾಟೀಲ್ ಆದೇಶ ಮಾಡಿದ್ದರು. ಜುಲೈ 26ರಂದು ಆದೇಶ ಹೊರಡಿಸಿದ್ದ ಆದೇಶದ ನಂತರವು ಇಂತಹ ಘಟನೆ ನಡಡೆದಿದೆ. ಪೊಲೀಸ್ ಇಲಾಖೆಯಿಂದ ಜಾಂಬೋಟಿ ಬಳಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು ಪೊಲೀಸರನ್ನ ಯಾಮಾರಿಸಿ ಸರ್ಕಾರಿ ವಾಹನ ಬಳಸಿ ವೈದ್ಯರು, ಹೆಸ್ಕಾಂ ಸಿಬ್ಬಂದಿ ಗ್ಯಾಂಗ್ ನಿಷೇದಿತ ಅರಣ್ಯ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅಡುಗೆ ಮಾಡಿ ಎಣ್ಣೆ ಪಾರ್ಟಿ ಮಾಡಿದ ಘಟನೆ ಜರುಗಿತ್ತು.
ಬೆಳಗಾವಿ ಜಿಲ್ಲೆಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಎಣ್ಣೆ ಪಾರ್ಟಿ ಪ್ರಕರಣ ಹಾಗೂ ನಿರ್ಬಂಧ ಪ್ರದೇಶದಲ್ಲಿ ಅಕ್ರಮ ಪ್ರವೇಶ ಹಿನ್ನೆಲೆಯಲ್ಲಿ ಓರ್ವ ವೈದ್ಯ ಸೇರಿ ನಾಲ್ಕು ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಗ್ಯಾಸ್ ಸ್ಟೋ, ಅಡಿಗೆ ಸಾಮಗ್ರಿ ಸೀಜ್ ಮಾಡಿದ ಅರಣ್ಯಾಧಿಕಾರಿಗಳು.
ಪಾಲ್ಸ್ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಹೆಸ್ಕಾಂ ಸಿಬ್ಬಂದಿಗಳನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು. ಮತ್ತು ಹೆಸ್ಕಾಂ ಇಲಾಖೆಗೆ ಸೇರಿದ್ದ ಬುಲೆರೋ ವಾಹನದಲ್ಲಿ ಬಂದಿದ್ದ ಸಿಬ್ಬಂದಿಗಳ ಮೇಲೆ ವೈಲ್ಡ್ ಲೈಫ್ ಆಕ್ಟ್ 7 ಅಡಿಯಲ್ಲಿ ಕೇಸ್ ದಾಖಲಾಗಿದೆ. ಜಾಂಬೋಟಿ ವಲಯ ಅರಣ್ಯ ಕಚೇರಿಯಲ್ಲಿಗ ಪ್ರಕರಣ ದಾಖಲಾಗಿದೆ.
8 ಜನರ ತಂಡ ಅರಣ್ಯ ಪ್ರದೇಶದಲ್ಲಿ ಮೋಜು ಮಸ್ತಿ ಮಾಡಿದನ್ನು ಬಚ್ಚಿಟ್ಟ ಅರಣ್ಯ ಇಲಾಖೆಯವರು ನಾಲ್ವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ದರು. ಉಳಿದ ನಾಲ್ವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಲು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಅರಣ್ಯ ಇಲಾಖೆಯವರಿಗೆ ನಿರ್ದೇಶನ ನೀಡಿದ್ದಾರೆ.
ನಿರ್ಬಂಧನೆಯನ್ನು ಉಲ್ಲಂಘಿಸಿ ಖಾನಾಪೂರ ತಾಲೂಕಿನ ಬಟವಡೆ ಫಾಲ್ಸ್ ಬಳಿ ಅರಣ್ಯ ಪ್ರದೇಶದಲ್ಲಿ ಮೋಜು ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಜನರ ವಿರುದ್ಧ ದೂರು ದಾಖಲಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎನ್ನಲಾದ ಉಳಿದ ನಾಲ್ವರು ಹೆಸ್ಕಾಂ ಸಿಬ್ಬಂದಿ ವಿರುದ್ಧವೂ ದೂರು ದಾಖಲಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನವನ್ನು ನೀಡಲಾಗಿದೆ.
– ನಿತೇಶ್ ಪಾಟೀಲ, ಜಿಲ್ಲಾಧಿಕಾರಿ


