ಆರೋಗ್ಯ ಇಲಾಖೆ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಪ್ರಕರಣ : ಏಳು ಸಿಬ್ಬಂದಿ ಅಮಾನತು
ಬೆಳಗಾವಿ : ಇಲ್ಲಿನ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋದ ಆವರಣದಲ್ಲಿನ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಇಲ್ಲಿನ ಸಿಬ್ಬಂದಿಗಳು ಗಾಂಧಿ ಜಯಂತಿಯ ದಿನದಂದು ಗುಂಡಿನ ಪಾರ್ಟಿ ಮಾಡಿದ ಏಳು ಜನರನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಕೋಣಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಗಾಂಧಿ ಜಯಂತಿಯ ದಿನದಂದು ಜಿಲ್ಲಾಡಳಿತ ಮದ್ಯ, ಮಾಂಸ ಮಾರಾಟ ನಿಷೇಧ ಮಾಡಿರುತ್ತದೆ. ಜಿಲ್ಲೆಯ ಜನರ ಆರೋಗ್ಯ ಕಾಪಾಡಬೇಕಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುಂಡು, ತುಂಡು ಪಾರ್ಟಿ ಮಾಡಿದ್ದರು.
ಪಾರ್ಟಿಯಲ್ಲಿದ್ದ ಡಿಎಚ್ ಓ ಕಾರು ಚಾಲಕ ಮಂಜುನಾಥ ಪಾಟೀಲ್,
ಮಹೇಶ ಹಿರೇಮಠ, ಸತ್ಯಪ್ಪ ತಮ್ಮಣ್ಣವರ, ಅನಿಲ್ ತಿಪ್ಪನ್ನವರ, ರಮೇಶ ನಾಯಕ, ಯಲ್ಲಪ್ಪ ಮುನವಳ್ಳಿ, ದೀಪಕ ಗಾವಡೆ ಸೇರಿ ಏಳು ಜನರನ್ನು ಅಮಾನತ್ತು ಮಾಡಿದ್ದಾರೆ.
ಇದು ಕಳೆದ ಐದಾರು ತಿಂಗಳ ಹಿಂದಿನ ವಿಡಿಯೋ. ಪಾರ್ಟಿ ಮಾಡಿದ್ದು ನಮ್ಮ ಸಿಬ್ಬಂದಿಗಳು. ಇದು ಗಾಂಧಿ ಜಯಂತಿಯಂದು ನಡೆದಿಲ್ಲ. ಪಾರ್ಟಿ ಮಾಡಿದ ಏಳು ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ.
-ಡಾ. ಮಹೇಶ ಕೋಣಿ, ಜಿಲ್ಲಾ ಆರೋಗ್ಯಾಧಿಕಾರಿ, ಬೆಳಗಾವಿ

