ಪುಟಾಣಿಗೆ ಕೊಟ್ಟ ಭರವಸೆ ಈಡೇರಿಸುವರಾ ಜಿಲ್ಲಾಧಿಕಾರಿ
ಚನ್ನಮ್ಮನ ಕಿತ್ತೂರು : ಇಲ್ಲಿಯ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂಎಸ್ಆಯ್ಎಲ್ ( ಮದ್ಯ ಮಾರಾಟ ಮಹಿಳೆ ) ಬೇರೆ ಕಡೆ ಸ್ಥಳಾಂತರಿಸಬೇಕು ಇಲ್ಲವಾದರೆ ಬಂದ್ ಮಾಡಬೇಕು ಎಂದು ನೂರಾರು ಮಹಿಳೆಯರು ಒತ್ತಾಯಿಸಿದ್ದಾರೆ.
ಇಲ್ಲಿಯ ಶೆಟ್ಟರ ಕಲ್ಯಾಣ ಮಂಟಪದಲ್ಲಿ ನಡೆದ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಮುಂದೆ ಮಹಿಳೆಯರು ತಮಗೆ ಆಗುವ ಸಮಸ್ಯೆಗಳನ್ನು ಅಳಲು ತೋಡಿಕೊಂಡರು.
ಸೋಮವಾರ ಪೇಟೆಯ ಚನ್ನಮ್ಮನ ಮೂರ್ತಿ ಪಕ್ಕದಲ್ಲಿರುವ ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆ ಪ್ರತಿ ದಿನ ನೂರಾರು ಜನ ಬರುತ್ತಾರೆ. ಅದೇ ಅಂಗಡಿ ಮುಂದೆ ಕುಳಿತು ಮದ್ಯ ಸೇವೆನೆ ಮಾಡುತ್ತಾರೆ. ಇದರಿಂದ ಇಲ್ಲಿರುವ ನೂರಾರು ಕುಟುಂಬಗಳು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.
ಶಾಲಾ-ಕಾಲೇಜುಗಳಿಗೆ ಹೋಗುವ ಹೆಣ್ಣು ಮಕ್ಕಳ ಮೇಲೆ ವಾಹನ ತೆಗೆದುಕೊಂಡು ಬರುವುದು ಹಾಗೂ ಕೆಟ್ಟ ವರ್ತನೆ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲು ಭಯವಾಗುತ್ತದೆ ಎಂದು ಮಕ್ಕಳು ಜಿಲ್ಲಾಧಿಕಾರಿಗಳ ಮುಂದೆ ಹೇಳಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ, ತಾಲೂಕು ಆಡಳಿತಕ್ಕೆ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇನ್ನೂವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಬರುವ ಕಿತ್ತೂರು ಉತ್ಸವದ ಒಳಗೆ ಈ ಮದ್ಯದ ಮಳಿಗೆಯನ್ನು ಬಂದ್ ಮಾಡಬೇಕು. ಇಲ್ಲವಾದರೆ ಉತ್ಸವದಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಇಲ್ಲಿಯ ಮಹಿಳೆಯರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.


