Select Page

Advertisement

ರಸ್ತೆ ಅಗಲಿಕರಣಕ್ಕೆ ಮುಸ್ಲಿಂ ಸ್ಮಶಾನ ತಡೆಗೋಡೆ ಅಡ್ಡಿ ; ಸ್ಥಳಕ್ಕೆ ದೌಡಾಯಿಸಿದ ಡಿಸಿ ಹೇಳಿದ್ದೇನು..?

ರಸ್ತೆ ಅಗಲಿಕರಣಕ್ಕೆ ಮುಸ್ಲಿಂ ಸ್ಮಶಾನ ತಡೆಗೋಡೆ ಅಡ್ಡಿ ; ಸ್ಥಳಕ್ಕೆ ದೌಡಾಯಿಸಿದ ಡಿಸಿ ಹೇಳಿದ್ದೇನು..?




ಸಂಕೇಶ್ವರ : ಪಟ್ಟಣದ ನಿಡಸೋಸಿ ರಸ್ತೆ ಅಗಲಿಕರಣ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಅಂಟಿಕೊಂಡಿರುವ ಸಮಸ್ಯೆ ಯನ್ನು ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಶೀಘ್ರವಾಗಿ ಇತ್ಯರ್ಥ ಮಾಡಲಾಗುವದು ಎಂದು‌ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಮಂಗಳವಾರ ಸಂಕೇಶ್ವರಕ್ಕೆ ದಿಢೀರ್ ಭೇಟಿ ನೀಡಿ ಹಿಂದು ಹಾಗೂ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ದೀರ್ಘ ಚರ್ಚೆ ನಡೆಸಿದರು. ನಿಡಸೋಶಿ ರಸ್ತೆ ನಿರ್ಮಾಣಕ್ಕೆ ಎದುರಾಗಿರುವ ಸ್ಮಶಾನ ಸಮಸ್ಯೆ ಕುರಿತು ಮುಸ್ಲಿಂ ಸಮುದಾಯದವರು ಇನ್ನೊಂದು ವಾರದ ಕಾಲಾವಕಾಶ ಕೇಳಿದರು, ಆದ್ದರಿಂದ ಜಿಲ್ಲಾಧಿಕಾರಿ ನಿಡಸೋಶಿ ರಸ್ತೆ ನಿರ್ಮಾಣಕ್ಕೆ ಒಂದು ವಾರದ ಗಡುವು ಘೋಷಿಸಿದರು.

ಬಳಿಕ ನಿಡಸೋಸಿ ರಸ್ತೆಯಲ್ಲಿರುವ ಮುಸ್ಲಿಂ ಸಮುದಾಯದ ಸ್ಮಶಾನವನ್ನು ಜಿಲ್ಲಾಧಿಕಾರಿ ಮಹ್ಮದ್ ರೋಷನ್‌ ಅವರು ಪರಿಶೀಲಿಸಿದರು ಮತ್ತು ಸುನ್ನತ್ ಜಮಾತ್ ತಂಜಿಮ್ ಸಮಿತಿಯ ಅಧ್ಯಕ್ಷ ಹಾಜಿ ದಸ್ತಗಿರ್ ಟೆರ್ನಿ, ಹಾಜಿ ಇಲ್ಯಾಸ್ ಮುಲ್ಲಾ ಜಮಾತ್ ಮುಖ್ಯಸ್ಥ ಮತ್ತು ಮುಫ್ತಿ ಅವರೊಂದಿಗೆ ದೀರ್ಘ ಚರ್ಚೆ ನಡೆಸಿದರು.

ಇದೇ ಸಮಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸಂಕೇಶ್ವರ ಪಟ್ಟಣದ ನಿಡಸೋಸಿ ರಸ್ತೆಯಲ್ಲಿರುವ ಸುನ್ನತ್ ಜಮಾತ್ ತಂಜಿಮ್ ಸಮಿತಿಯ ಎರಡೂ ಸ್ಮಶಾನಗಳನ್ನು ಪರಿಶೀಲಿಸಿರುವುದಾಗಿ ಹೇಳಿದರು. ಬಿಲಾಲ್ ಮಸೀದಿಯ ಪಕ್ಕದಲ್ಲಿರುವ ಸ್ಮಶಾನದ ಗಡಿ ಗೋಡೆಯ ಬಳಿ ಹೆಚ್ಚುವರಿ ಸಮಾಧಿಗಳಿರುವುದರಿಂದ ಸ್ಮಶಾನದ ಗಡಿ ಗೋಡೆಯನ್ನು ತೆಗೆದುಹಾಕುವ ಬಗ್ಗೆ ಸುನ್ನತ್ ಜಮಾತ್ ತಂಜಿಮ್ ಸಮಿತಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.

ಸ್ಮಶಾನ ಗೋಡೆಯ ಬಳಿ 8 ರಿಂದ 10 ಸಮಾಧಿಗಳಿವೆ, ಆದ್ದರಿಂದ ಹೆಚ್ಚಿನ ಹಾನಿಯಾಗದಿದ್ದರೂ, ಸಮಾಧಿಗಳನ್ನು ತೆಗೆದುಹಾಕಲು ಸಂಬಂಧಪಟ್ಟ ಸಂಬಂಧಿಕರಿಂದ ಒಪ್ಪಿಗೆ ಪಡೆಯುವ ಬಗ್ಗೆ ಮತ್ತು ಸಮಾಧಿಗಳನ್ನು ಅಗೆಯಲು ಕಾನೂನು ನಿಬಂಧನೆಗಳ ಬಗ್ಗೆ ಚರ್ಚಿಸಿರುವದಾಗಿ ತಿಳಿಸಿದರು. ಸುನ್ನತ್ ಜಮಾತ್ ತಂಜಿಮ್ ಸಮಿತಿ ಮತ್ತು ಸಮುದಾಯದವರು ಈ ಬಗ್ಗೆ ಚರ್ಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಬಳಿ ಒಂದು ವಾರದ ಕಾಲಾವಕಾಶ ಕೇಳಿದ್ದಾರೆ. ಇದಕ್ಕೆ ಒಪ್ಪಿಗೆ ನೋಡಲಾಗಿದೆ. ಹಿಂದೂ-ಮುಸ್ಲಿಂ ಸಹೋದರರು ಈ ನಿರ್ಧಾರವನ್ನು ಸ್ವಾಗತಿಸುತ್ತಾರೆ.

ನಿಡಸೋಸಿ ರಸ್ತೆ ನಿರ್ಮಾಣದ ಬಗ್ಗೆ ತಾವು ತೆಗೆದುಕೊಂಡ ನಿರ್ಧಾರವನ್ನು ಹಿಂದೂ-ಮುಸ್ಲಿಂ ಸಹೋದರರು ಖಂಡಿತವಾಗಿಯೂ ಸ್ವೀಕರಿಸುತ್ತಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಏಕೆಂದರೆ ಅಭಿವೃದ್ಧಿಗೆ ಯಾರೂ ಅಡೆತಡೆಗಳನ್ನು ಸೃಷ್ಟಿಸುವುದಿಲ್ಲ. ಸಂಕೇಶ್ವರದಲ್ಲಿ ಹಿಂದೂ-ಮುಸ್ಲಿಂ ಸಹೋದರರು ಭಾವೈಕ್ಯ ಯಿಂದ ಬಾಳುತಿದ್ದಾರೆ. ಯಾರಿಗೆ ಯಾವದೇ ರೀತಿಯ ತೊಂದರೆ ಆಗದಂತೆ ಒಂದು ವಾರದಲ್ಲಿ ಈ ಸಮಸ್ಯೆ ಇತೇರ್ಥ ಮಾಡುವದಾಗಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್‌ ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಎಸಿ ಶ್ರವಣ ನಾಯಕ, ಹುಕ್ಕೇರಿ ತಹಶಿಲ್ದಾರ ಕಟ್ಟಿಮನಿ, ಸಂಕೇಶ್ವರ ಸಿಪಿಐ ಅವಜಿ ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!