Select Page

ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಮನೆಗೆ ಕಲ್ಲೆಸೆದ ಪಾಗಲ್ ಪ್ರೇಮಿ ; ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸ್

ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಮನೆಗೆ ಕಲ್ಲೆಸೆದ ಪಾಗಲ್ ಪ್ರೇಮಿ ; ಹೆಡೆಮುರಿ ಕಟ್ಟಿದ ಬೆಳಗಾವಿ ಪೊಲೀಸ್

ಬೆಳಗಾವಿ : ಇಡೀ ರಾಜ್ಯವನ್ನೆ ಬೆಚ್ಚಿ ಬಿಳಿಸಿರುವ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ನಂತರವೂ ತಣ್ಣಗಾಗಿಲ್ಲ ಪಾಗಲ್ ಪ್ರೇಮಿಮಿಗಳ ಕಾಟ ಬೆಳಗಾವಿಯಲ್ಲಿ ಸೈಕೋಪಾತ್ ಪಾಗಲ್ ಪ್ರೇಮಿಯ ಕಾಟದಿಂದ ಇಡೀ ಕುಟುಂಬವೇ ನರಕಯಾತನೆ ಅನುಭವಿಸುತ್ತಿರುವ ಘಟನೆ ತಾಲೂಕಿನ ಕಿಣೆಯ ಗ್ರಾಮದಲ್ಲಿ ‌ತಡವಾಗಿ ಬೆಳಕಿಗೆ ಬಂದಿದೆ.

ಕಿಣಿಯೆ ಗ್ರಾಮದ ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆಯೇ ಕಲ್ಲು ತೂರಿ ಕಿಟಕಿ ಗ್ಲಾಸ್ ಪುಡಿ ಪುಡಿ ಮಾಡಿ ಗ್ರಾಮದ ‌ಜನರನ್ನೆ ಬೆಚ್ಚಿ ಬಿಳಿಸುತ್ತಿದ್ದಾನೆ. ಈ‌ ಪಾಗಲ್ ಪ್ರೇ(ಕ್ರಿ)ಮಿ ಈತನ ಹುಚ್ವಾಟದಿಂದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

ಹುಬ್ಬಳ್ಳಿ ಮೂಲದ ನೇಹಾಳಂತೆ ಕೊಲೆ ಮಾಡುವ ಬೆದರಿಕೆ ಹಾಕಿರುವ ಮಾಡಿದ್ದಾನೆ. ಪ್ರೀತಿಸು, ಮದುವೆ ಆಗೆಂದು ಕಳೆದ ಮೂರು ವರ್ಷಗಳಿಂದ ಪೀಡಿಸುತ್ತಿರುವ ಪಾಗಲ್ ಪ್ರೇಮಿ ಯಾರೂ ಗೊತ್ತಾ ಈ ಸೈಕೋ ಬೆಳಗಾವಿ ತಾಲೂಕಿನ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬಾತನದ ಹುಚ್ಚಾಟ ಆರೋಪ ಬಂದಿದೆ.

ಅದೇ ಗ್ರಾಮದ ಬಿಕಾಂ ಓದುತ್ತಿರುವ ಯುವತಿ ಬೆನ್ನು ಬಿದ್ದು, ಪೀಡಿಸುತ್ತಿರುವ ತಿಪ್ಪಣ್ಣ ನಿತ್ಯ ಕಾಲೇಜಿಗೆ ಹೋಗುವಾಗಲೇ ಫಾಲೋ ಮಾಡಿ ಯುವತಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಆರೋಪ ಯುವತಿಯ ಕುಟುಂಸ್ಥರ ಮಾಡಿದ್ದಾರೆ.

ತಿಪ್ಪಣ್ಣ ಡೋಕರೆ ಹುಚ್ಚಾಟಕ್ಕೆ ಬೇಸತ್ತು ಕಾಲೇಜಿಗೆ ಹೋಗುವುದನ್ನೇ (21) ಯುವತಿ ನಿಲ್ಲಿಸಿ ಕಿಣೆಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ವಾಸವಿದ್ದಾಳೆ. ಯುವತಿ ಜೊತೆಗೆ ಮದುವೆ ಮಾಡಿ ಕೊಡುವಂತೆ ಇಲ್ಲಿದ್ದರೆ ಹತ್ಯೆಗೈಯ್ಯುವುದಾಗಿ ಯುವತಿ ಹಾಗೂ ತಾಯಿಗೆ ತಿಪ್ಪಣ್ಣ ಬೇದರಿಕೆ ಹಾಕಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೆಲ ತಿಂಗಳ ಹಿಂದೆಯೇ ಯುವತಿ ಮನೆಯ ಹಿಂಬಾಗಿಲಿಗೆ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದನಂತೆ ಯುವಕ. ಇದಾದಬಳಿಕ ಮೂರ ದಿನಗಳ ಹಿಂದೆಯೂ ಮನೆಗೆ ಬಂದೂ ಗಲಾಟೆ ಮಾಡಿ ಮನೆಯಲ್ಲಿ ಯಾರು ಇಲ್ಲದಿರುವಾಗ ಕಿಟಕಿ ಗ್ಲಾಸ್ ಒಡೆದು ಪುಂಡಾಟ ಮೆರೆದಿದ್ದಲ್ಲದೆ, ಮನೆಯ ಪಕ್ಕದಲ್ಲಿಯೇ ಜಮೀನಿಗೆ ಬರುವ ನೆಪವೊಡ್ಡಿ ಕಿರುಕುಳ ನೀಡಿದ್ದಾನೆ.

ಯಾವುದೇ ಕೆಲಸ ಮಾಡದೇ ಊರಲ್ಲಿ ಸುತ್ತಾಡುವ ತಿಪ್ಪಣ್ಣ ಡೋಕರೆಯ ನಡೆಗೆ ಒಂದೇ ಸಮುದಾಯ ಆದರೂ ಪುತ್ರಿಯನ್ನು ಕೊಡಲು ನಿರಾಕರಣೆ ಮಾಡಿದ್ದಾರೆ. ತಿಪ್ಪಣ್ಣನ ಕಿರಿಕಿರಿಗೆ ಬೇಸತ್ತು ಪೊಲೀಸರ ಮೊರೆ ಹೋಗಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆಯೇ ತಿಪ್ಪಣ್ಣ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಪೊಲೀಸರ ವಾರ್ನ್‌ಗೆ ಕೆಲ ದಿನಗಳ ಕಾಲ ಯುವತಿ ತಂಟೆಗೆ ಹೋಗದೇ ಸೈಲೆಂಟ್ ಆಗಿದ್ದ. ಈಗ ಮತ್ತೆ ಬಾಲಬಿಚ್ಚಿರುವ ತಿಪ್ಪಣ್ಣ, ಮತ್ತೆ ಪೊಲೀಸರ ಮೊರೆ ಹೋಗಿದ್ದಾರೆ ಕುಟುಂಬಸ್ಥರು.

ಎರಡು ಬಾರಿಯೂ ನಾಳೆ ಬನ್ನಿ ಎಂದು ಹೇಳಿ ಕಳಿಸಿರುವ ಪೊಲೀಸರು ಪೊಲೀಸರ ನಿರ್ಲಕ್ಷ್ಯಕ್ಕೆ ಜೀವಭಯದಲ್ಲೇ ಜೀವನ ನಡೆಸುತ್ತಿರುವ ಯುವತಿ ಹಾಗೂ ಆಕೆಯ ತಾಯಿ ಇದ್ದಾರೆ.
ಕಳೆದ 2000ರಲ್ಲಿ ಉಪೇಂದ್ರ, ಶಿವರಾಜಕುಮಾರ ಹಾಗೂ ಸೋನಾಲಿ ಬೇಂದ್ರೆ ನಟಿಸಿರುವ ಪ್ರೀತ್ಸೆ ಸಿನಿಮಾ‌ ಮಾದರಿಯಲ್ಲಿಯೇ ಕುಟುಂಬದವರ ವಿರೋಧ ಇದ್ದರೂ ಹುಚ್ಚಾಟ ಮೆರೆಯುತ್ತಿರುವ ಈಗಿನ ಪಾಗಲ್ ಪ್ರೇಮಿಯನ್ನು ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!