ಹಳಿ ತಪ್ಪಿದ್ದ ಮಹಾನಗರ ಪಾಲಿಕೆ ಯಂತ್ರಕ್ಕೆ ಅಶೋಕ ಸವಾರಿ
ಬೆಳಗಾವಿ : ಕಳೆದ ಕೆಲ ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಜನ ಅಕ್ಷರಶಃ ನರಕಯಾತನೆ ಅನುಭವಿಸಿದ್ದರು. ನೀರು, ರಸ್ತೆಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರವೇ ಸಿಗದೆ ಸುಮ್ಮನಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತು ಹೋಗಿದ್ದ ಜನರಿಗೆ ನೂತನ ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಮೇಲೆ ನಿರೀಕ್ಷೆಯ ಹೆಚ್ಚಾಗಿದೆ.
:::::::ಏನಾಗಿತ್ತು ನಗರ ಸಮಸ್ಯೆ :::::
ಕಳೆದ ನಾಲ್ಕೈದು ವರ್ಷಗಳಿಂದ ಬೆಳಗಾವಿ ಮಹಾನಗರ ವ್ಯಾಪ್ತಿಯ ಜನ ಕುಡಿಯುವ ನೀರಿನ ಸಮಸ್ಯೆ ಅನುಭವಿಸಿದ್ದರು ಅಧಿಕಾರಿಗಳು ಮಾತ್ರ ಯಾವುದೇ ಕರ್ಮಕ್ಕೆ ಮುಂದಾಗದಿರುವುದು ವಿಪರ್ಯಾಸ. ನೀರು ಸರಬರಾಜು ಕುರಿತು ಖಾಸಗಿ ಕಂಪನಿ ವಿರುದ್ಧ ಜನ ಅಪಸ್ವರ ಎತ್ತಿದ್ದರು ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಯಕ್ಷಪ್ರಶ್ನೆ. ಇನ್ನೂ ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಗಳು ಮಾತ್ರ ಕುಡಿಯುವ ನೀರಿನ ಸಮಸ್ಯೆ ಕುರಿತು ಹಾರಿಕೆ ಉತ್ತರ ಕೊಟ್ಟಿದ್ದು ಬಿಟ್ಟರೆ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ.
ರಸ್ತೆ ಗುಂಡಿಗಳೇ ನಗರದಲ್ಲಿ ಮಹಾರಾಜ : ಹೌದು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟಿದೆ. ದಿನನಿತ್ಯ ವಾಹನ ಸವಾರರು ಗುಂಡಿ ತಪ್ಪಿಸಿಕೊಂಡು ಸಂಚರಿಸುವುದೇ ದೊಡ್ಡ ಕಾಯಕವಾಗಿದೆ. ಇನ್ನೂ ನಗರದ ಹೃದಯಭಾಗದಲ್ಲೇ ರಸ್ತೆ ಪರಿಸ್ಥಿತಿ ಹದಗೆಟ್ಟಿದ್ದರು ಕನಿಷ್ಠಪಕ್ಷ ಗುಂಡಿ ಮುಚ್ಚುವ ಕಾರ್ಯಕ್ಕೂ ಪಾಲಿಕೆ ಅಧಿಕಾರಿಗಳು ಮಂದಾಗದಿರುವುದು ವಿಪರ್ಯಾಸ. ಅನೇಕ ಸಂದರ್ಭಗಳಲ್ಲಿ ಗುಂಡಿ ತಪ್ಪಿಸಲು ಹೋಗಿ ವಾಹನ ಸವಾರರು ಕೈಕಾಲು ಮುರಿದುಕೊಂಡ ಪ್ರಸಂಗಗಳು ನಡೆದರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಮೌನ.
ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಎಲ್ಲಿ : ಬೆಳಗಾವಿ ನಗರದಲ್ಲಿ ಕಳೆದ ಹಲವು ವರ್ಷಗಳಿಂದಲೂ ಪಾರ್ಕಿಂಗ್ ಸಮಸ್ಯೆ ಇದ್ದರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನೂ ಅನೇಕ ಕಡೆಗಳಲ್ಲಿ ಸಾರ್ವಜನಿಕ ಆಸ್ತಿಗಳನ್ನೇ ಬಳಸಿಕೊಂಡು ಪಾರ್ಕಿಂಗ್ ಮೂಲಕ ಹಣ ವಸೂಲಿ ಮಾಡುವ ಕೆಲಸ ನಡೆಯುತ್ತಿದ್ದರು ಯಾರೂ ಖ್ಯಾರೆ ಎನ್ನುತ್ತಿಲ್ಲ. ಹಾಗೆಯೇ ನಗರದ ಭಾಗಶಃ ಪಾರ್ಕಿಂಗ್ ಸಮಸ್ಯೆ ಇದ್ದರು ಇದಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವಲ್ಲಿ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ವಿಫಲವಾಗಿದ್ದು, ಇವರ ಕಾರ್ಯವೈಖರಿಗೆ ಹಿಡಿದ ಕನ್ನಡಿ.
ನೂತನ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಡಳಿತ ವೈಖರಿಯ ಫಲವಾಗಿ ಬೆಳಗಾವಿ ಮಹಾನಗರ ಪಾಲಿಕೆ ಕಾರ್ಯಕ್ಕೆ ವೇಗ ಹೆಚ್ಚಿಸಿದ್ದಾರೆ. ಒಟ್ಟಿನಲ್ಲಿ ಕುಂದಾನಗರಿ ಜನರಿಗೆ ನೆಮ್ಮದಿಯ ಬದುಕು ಹಾಗೂ ಮೂಲಭೂತ ಸೌಕರ್ಯ ಸಿಗಲಿ ಎಂಬುದು ಎಲ್ಲರ ಆಶಯ.


