Video – ವಿದ್ಯುತ್ ಕಂಬ ಹತ್ತಿ ಹಾಡು ಹಾಡಿದ ಭೂಪ ; ಹೇ ಪ್ರಭು ಏ ಕ್ಯಾ ಹುವಾ….!
ಬೆಳಗಾವಿ : ಕರೆಂಟ್ ಹೋದ ಸಮಯದಲ್ಲಿ ಮಾನಸಿಕ ಅಸ್ತವ್ಯಸ್ತ ಯುವಕನೋರ್ವ ವಿದ್ಯುತ್ ಕಂಬದ ಟಿಸಿ ಏರಿ ಹಾಡು ಹೇಳುತ್ತ ಕುಳಿತ ಘಟನೆಯಿಂದ ಬಿಚ್ಚಿ ಬಿದ್ದ ಜನರು ಹೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಟಿಸಿ ಮೇಲಿದ್ದವನ್ನು ಕೆಳಗೆ ಇಳಿಸಿದ ಘಟನೆ ಶುಕ್ರವಾರ ಇಲ್ಲಿನ ಟಿಳಕಚೌಕನಲ್ಲಿ ನಡೆದಿದೆ.
ಟಿಳಕಚೌಕ್ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಅಂಗಡಿ ಮುಂಗಟ್ಟುಗಳ ಮುಂದೆ ವಾಸ ಇರುವ ಇತ ಮಾನಸಿಕ ಅಸ್ತವ್ಯಸ್ತ. ಸಂಜೆ ವಿದ್ಯುತ್ ಕಡಿತಗೊಂಡಿದ್ದರಿಂದ ಟಿಸಿ ಕಂಬ ಏರಿ ಏ ದೋಸ್ತೀ ಹಮ್ ನಹೀ ಚೋಡೇಂಗೆ ಎಂದು ಹಾಡು ಹಾಡಿ ಟಿಸಿ ಮೇಲೆ ಕುಳಿತು ಜನರತ್ತ ಕೈ ಬಿಸುತ್ತಿದ್ದ.
ಈ ವೇಳೆ ಜನರು ಗಮನಿಸಿ ಹೆಸ್ಕಾಂ ಸಿಬ್ಬಂದಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಸಿಬ್ಬಂದಿಗಳು ಆತನನ್ನು ಕೆಳಗೆ ಇಳಿಸಲು ಹರಸಾಹಸ ಪಟ್ಟರು. ಸುಮಾರು 40 ನಿಮಿಷಗಳ ಕಾಲ ಟಿಳಕಚೌಕನಲ್ಲಿ ಸಂಚಾರ ದಟ್ಟಣೆಯಾಗಿತ್ತು.

