ಬೆಳಗಾವಿ : ರೈತ ಸಂಘ ಕರೆ ಕೊಟ್ಟಿದ್ದ ಜೈಲ್ ಭರೋ ಚಳುವಳಿ ನಿರ್ಣಾಯಕ ಹಂತ ತಲುಪಿದ್ದು ಇಂದು ಪೊಲೀಸರು ರೈತ ಮುಖಂಡರನ್ನು ಬಂಧಿಸಿದಷ್ಟು ರೈತರ ಶಕ್ತಿ ಹೆಚ್ಚುತ್ತಿದೆ‌.

ರೈತ ಸಂಘದ ಮುಖಂಡರಾದ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಪಡಸಲಗಿ ಜೊತೆ ನೂರಾರು ರೈತರನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ರೈತರ ಆಕ್ರೋಶದ ಕಟ್ಟೆ ಒಡೆದಿದ್ದು ಬಂಧಿಸಿದಷ್ಟು ರೈತರು ಬೀದಿಗೆ ಬರುತ್ತಿದ್ದಾರೆ.

ಈಗಾಗಲೇ ಬೆಳಗಾವಿ ಸೇರಿ ಹಲವಾರು ಜಿಲ್ಲೆಗಳಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದು ಅನೇಕ ರಸ್ತೆಗಳು ಬಂದ್ ಆಗಿವೆ. ಜೊತೆಗೆ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾವಣೆ ಆಗುತ್ತಿದ್ದು, ಪೊಲೀಸರು ಕಂಗಾಲಾಗಿದ್ದಾರೆ.