ದ್ವಿಚಕ್ರ ವಾಹನ ಕಳ್ಳರ ಬಂಧನ ; ಐದು ಬೈಕ್ ವಶಕ್ಕೆ

ಬೆಳಗಾವಿ : ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಹೆಡೆಮುರಿಕಟ್ಟುವಲ್ಲಿ ನಗರದ ಎಪಿಎಂಸಿ ಪೊಲೀಸರು ಯಶಸ್ವಿಯಾಗಿದ್ದು ಐದು ಬೈಕ್ ವಶಕ್ಕೆ ಪಡೆದಿದ್ದಾರೆ.
ಸೈಫಲಿ ನಾಗಾರ್ಜಿ (25), ಅನಿಶ್ ಮುಜಾವರ್ (18) ಬಂಧಿತ ಆರೋಪಿಗಳು. ಸತೀಶ್ ಎಂಬುವವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಎಪಿಎಂಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಐದು ಬೈಕ್ ವಶಕ್ಕೆ ಪಡೆಯಲಾಗಿದೆ.ಆರೋಪಿಗಳನ್ನು ಪತ್ತೆ ಹಚ್ಚಲು ಇನ್ಸ್ಪೆಕ್ಟರ್ ಯು,ಎಸ್ ಅವಟಿ, ಪಿಎಸ್ಐ ಎಸ್.ಆರ್ ಮುತ್ತತ್ತಿ ಸೇರಿದಂತೆ ಸಿಬ್ಬಂದಿ ವರ್ಗ ಯಶಸ್ವಿಯಾಗಿದೆ.


