Select Page

Advertisement

ಕೂಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಗೆ ಒಲಿದ ಬೆಳಗಾವಿ ಮೇಯರ್ ಪಟ್ಟ

ಕೂಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಗೆ ಒಲಿದ ಬೆಳಗಾವಿ ಮೇಯರ್ ಪಟ್ಟ

ಬೆಳಗಾವಿ : ಪ್ರಯತ್ನ ಒಂದಿದ್ದರೆ ಈ ಭಾರತದ ಮಣ್ಣಿನಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ನಮ್ಮ ಸಂವಿಧಾನ ತೋರಿಸಿಕೊಟ್ಟಿದೆ. ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಮಹಿಳೆಗೆ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ ಒಲಿದಿದ್ದು ಹೊಸ ಇತಿಹಾಸ ಸೃಷ್ಟಿಸುವಲ್ಲಿ ಬಿಜೆಪಿ ಸಫಲವಾಗಿದೆ.

ಸ್ಥಳೀಯ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರ ಪ್ರಯತ್ನದ ಫಲವಾಗಿ ಮೊದಲಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಕಮಲ ತೆಕ್ಕೆಗೆ ಸೇರಿತ್ತು. ರಾಜ್ಯದೆ ಎರಡನೇ ಅತಿದೊಟ್ಟ ಮಹಾನಗರ ಪಾಲಿಕೆ ಎಂಬ ಖ್ಯಾತಿ ಹೊಂದಿರುವ ಬೆಳಗಾವಿ ಪಾಲಿಕೆಗೆ ಸಧ್ಯ ಮಹಿಳಾ ಸಾರಥಿ ಯಾಗಿರುವುದು ವಿಶೇಷ.

ಯಾರು ಈ ಮಹಿಳೆ : ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಶಿರಗೂರ ಗ್ರಾಮದ ಸವಿತಾ ಕಾಂಬಳೆ ಎಂಬುವವರು ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಸಂಸಾರದ ಏರುಪೇರಿನಿಂದ ಬೆಳಗಾವಿ ಮಹಾನಗರ ಸೇರಿದ್ದ ಸವಿತಾ ಇಲ್ಲಿಯೇ ಮನೆಗಳಲ್ಲಿ ಕೆಲಸ ಮಾಡುತ್ತಾ ಬದುಕು ನಡೆಸಿದ್ದಳು. ಈ ಮಧ್ಯೆಯೇ ಸವಿತಾ ನಗರದ ಸರ್ದಾರ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವರೆಗೆ ವಿಧ್ಯಾಭ್ಯಾಸ ಮಾಡಿದ್ದರು.

ಬದುಕಿನ ಜಂಜಾಟಗಳ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೇ ಮಾಡಿದ ಸವಿತಾ ಅವರು ಪಾಲಿಕೆ ಸಧಸ್ಯೆಯಾಗಿ ಆಯ್ಕೆಯಾಗಿದ್ದರು. ನಮ್ಮನ್ನು ಗೆಲ್ಲಿಸಿದ ಜನರ ಸೇವೆ ಮಾಡುತ್ತಾ ರಾಜಕೀಯವಾಗಿ  ಬೆಳೆದ ಸವಿತಾ ಅವರಿಗೆ ಅಂಬೇಡ್ಕರ್ ಅವರ ತತ್ವ ಹಾಗೂ ಆದರ್ಶಗಳೇ ಬದುಕಿನ ದಾರಿದೀಪವಾಗಿದೆ.

ಸಧ್ಯ ಸವಿತಾ ಅವರು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಸಮಾನತೆ ಮೂಲಮಂತ್ರ ಬೆಳಗಾವಿಯಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಪಕ್ಷದಲ್ಲಿ ನೊಂದ ತಳ ಸಮುದಾಯದವರಿಗೂ ಅವಕಾಶ ಸಿಗುತ್ತದೆ ಎಂಬುದಕ್ಕೆ ಸವಿತಾ ಅವರೇ ನಿದರ್ಶನ.

ಸವಿತಾ ಕಾಂಬಳೆ ಅವರು ಮೇಯರ್ ಆಗಿ ಆಯ್ಕೆಯಾಗಲು ಸ್ಥಳೀಯ ಶಾಸಕ ಅಭಯ್ ಪಾಟೀಲ್ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಅವರ ಶ್ರಮ ಸಾಕಷ್ಟಿದೆ. ಜೊತೆಗೆ ಅವಕಾಶ ಕಲ್ಪಿಸಿದ ಬಿಜೆಪಿ ಪಕ್ಷಕ್ಕೂ ಇವರು ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ದೇಶದ ರಾಷ್ಟ್ರಪತಿ ಹುದ್ದೆ ಮಹಿಳೆಯರ ಕೈಯಲ್ಲಿದ್ದು ಬೆಳಗಾವಿ ಪ್ರಥಮ ಪ್ರಜೆ ಸ್ಥಾನವೂ ಮಹಿಳೆಯರ ಪಾಲಾಗಿದ್ದು ಪ್ರಜಾಪ್ರಭುತ್ವದ ವೈಶಿಷ್ಟ್ಯ ಎಂದರೆ ತಪ್ಪಾಗಲಾರದು.

Advertisement

Leave a reply

Your email address will not be published. Required fields are marked *

error: Content is protected !!