ಭೀಕರ ಸ್ಪೋಟಕ್ಕೆ ನಲುಗಿದ ಜೀವಗಳು ; ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಬೆಳಗಾವಿ : ಬೈಲಹೊಂಗಲ ತಾಲೂಕಿನ ಇನಾಮದಾರ್ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಘಟನೆಯಲ್ಲಿ ಸಾವಿಗೀಡಾದವರ ಅಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ ಅಕ್ಷಯ ತೋಪಡೆ, ದೀಪಕ್ ಮುನ್ನೋಳಿ, ಸುದರ್ಶನ್ ಬನೋಶಿ ಎಂಬ ಮೂವರು ಕಾರ್ಮಿಕರು ನಿಧನರಾಗಿದ್ದಾರೆ. ಇನ್ನುಳಿದ ಐವರಿಗೆ ನಗರದ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಖಾನೆಯ ನಂ 1 ಕಂಪಾರ್ಟಮೇಂಟಿನಲ್ಲಿ ಘಟನೆ ಸಂಭವಿಸಿದ್ದು ವಾಲ್ ರಿಪೇರಿ ಮಾಡುವ ವೇಳೆ ಬ್ಲಾಸ್ಟ್ ಸಂಭವಿಸಿದೆ. ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

