ಡಿಕೆಶಿ ಬೆಂಬಲಿಸಿ ದೆಹಲಿಗೆ ಹಾರಿದ ಬೆಳಗಾವಿಯ ಇಬ್ಬರು ಕಾಂಗ್ರೆಸ್ ಶಾಸಕರು..!
ಬೆಂಗಳೂರು : ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಹಠ ತೊಟ್ಟಿರುವ ಕಾಂಗ್ರೆಸ್ ನ ಕೆಲ ಶಾಸಕರು ದೆಹಲಿ ಅಂಗಳಕ್ಕೆ ಕಾಲಿಟ್ಟಿದ್ದಾರೆ.
ಈ ಎಲ್ಲಾ ಕುತೂಹಲ ಮಧ್ಯೆ ಬೆಳಗಾವಿ ಜಿಲ್ಲೆಯ ಇಬ್ಬರು ಶಾಸಕರು ಡಿಕೆ ಶಿವಕುಮಾರ್ ಪರವಾಗಿ ಹೈಕಮಾಂಡ್ ಗಮನಸೆಳೆಯಲು ದೆಹಲಿಗೆ ತೆರಳಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ ನೇತೃತ್ವದ ತಂಡದಲ್ಲಿ ಇಬ್ಬರು ಶಾಸಕರಿದ್ದಾರೆ.
ಬೆಳಗಾವಿಯ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ದೆಹಲಿಗೆ ಭೇಟಿ ನೀಡಿರುವ ಶಾಸಕರಾಗಿದ್ದಾರೆ.
ಈ ತಂಡದಲ್ಲಿ ಚನ್ನಗಿರಿಯ ಬಸವರಾಜ ಶಿವಗಂಗಾ, ರಾಮನಗರದ ಇಕ್ಬಾಲ್ ಹುಸೇನ್, ಮದ್ದೂರಿನ ಉದಯ್ ಕದಲೂರು, ಹೊಸಕೋಟೆ ಶರತ್ ಬಚ್ಚೇಗೌಡ, ಮೂಡಗೆರೆಯ ನಯನಾ ಮೋಟಮ್ಮ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

