ರೈತರಿಗೆ ಸಿಹಿ ಸುದ್ದಿ : ಟನ್ ಗೆ 3,350 ರೂ ಬಿಲ್ ಘೋಷಿಸಿದ ಕಾರ್ಖಾನೆ…!
ಬೆಳಗಾವಿ : ರಾಜ್ಯ ಸರಕಾರ ಪ್ರತಿಟನ್ ಕಬ್ಬಿಗೆ ನೀಡುವ ಬೆಲೆಗಿಂತ 50 ರೂ ಜಾಸ್ತಿ ನೀಡುವುದಾಗಿ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಘೋಷಿಸಿದೆ.
ಸ್ವರೂಪ ಮಹಾದೇವರಾವ್ ಮಹಾಡಿಕ್ ಎಂಬುವವರ ಒಡೆತನದಲ್ಲಿರೋ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 3,350 ರೂ. ಘೋಷಿಸುವ ಮೂಲಕ ರೈತರ ಬೆಂಬಲಕ್ಕೆ ನಿಂತಿದೆ.
11 ಜನರ ಮೇಲೆ ಪ್ರಕರಣ ದಾಖಲು : ಶುಕ್ರವಾರ ಕಬ್ಬು ಬೆಳೆಗಾರರ ಪ್ರತಿಭಟನೆ ವೇಳೆ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪೊಲೀಸರ ಮೇಲೆ ಕಲ್ಲೆಸೆದ ಆರೋಪದ ಮೇಲೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿತರ ವಿರುದ್ಧ ಕಲ್ಲು ತೂರಾಟ ಹಾಗೆಯೇ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಎಡಿಜಿಪಿ ಹಿತೇಂದ್ರ ಮಾಹಿತಿ ನೀಡಿದರು.


