ರೈತರಿಗಾಗಿ ಹುಟ್ಟು ಹಬ್ಬ ಆಚರಿಸಲ್ಲ ; ಅಹೋರಾತ್ರಿ ಪ್ರತಿಭಟನೆ ಕುಳಿತ ವಿಜಯೇಂದ್ರ
ಬೆಳಗಾವಿ : ಪ್ರತಿ ಟನ್ ಕಬ್ಬಿಗೆ 3,500 ರೂ. ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕಿಚ್ಚು ಹೆಚ್ಚಾಗಿದ್ದು ರೈತರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಗುರ್ಲಾಪುರ ಕ್ರಾಸ್ ನ ನಿಪ್ಪಾಣಿ – ಮುಧೋಳ ರಸ್ತೆ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದು ಇಂದು ವಿಜಯೇಂದ್ರ ಭಾಗವಹಿಸಿ ರೈತರಿಗೆ ಬೆಂಬಲ ಸೂಚಿಸಿದ್ದಾರೆ. ನಾಳೆ ಅವರ ಹುಟ್ಟು ಹಬ್ಬ ಇದ್ದರೂ ರೈತರಿಗಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಲ್ಲ ಎಂದು ಘೋಷಿಸಿದ್ದಾರೆ.
ರೈತರ ಬೇಡಿಕೆ ಈಡೇರುವ ವರೆಗೂ ನಾನು ಈ ಸ್ಥಳದಿಂದ ಹೋಗಲ್ಲ ಎಂದು ಹೇಳುವ ಮೂಲಕ ವಿಜಯೇಂದ್ರ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಸಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಸರಕಾರದ ವಿರುದ್ಧ ವಿಜಯೇಂದ್ರ ಹರಿಹಾಯ್ದರು.

