Select Page

Advertisement

ಕಾನಿಪ ಜಿಲ್ಲಾಧ್ಯಕ್ಷರಾಗಿ ಡಾ. ಭೀಮಶಿ ಜಾರಕಿಹೊಳಿ ಅವಿರೋಧ ಆಯ್ಕೆ

ಕಾನಿಪ ಜಿಲ್ಲಾಧ್ಯಕ್ಷರಾಗಿ ಡಾ. ಭೀಮಶಿ ಜಾರಕಿಹೊಳಿ ಅವಿರೋಧ ಆಯ್ಕೆ


ಬೆಳಗಾವಿ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕಕ್ಕೆ 2025-28 ರ ಅವಧಿಗೆ ನಡೆದ ಚುನಾವಣೆಗೆ ಎಲ್ಲ ಹುದ್ಧೆಗಳಿಗೆ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಬಹುತೇಕ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಆಗಬೇಕಿದೆ.

ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಡಾ. ಭೀಮಶಿ ಎಲ್.ಜಾರಕಿಹೊಳಿ, ಉಪಾಧ್ಯಕ್ಷರಾಗಿ ಕುಂತಿನಾಥ ಕಲಮನಿ, ತಾನಾಜಿರಾವ್ ಮುರಂಕರ, ಭೀಮಪ್ಪ ಕಿಚಡಿ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಕಾರ್ಯದರ್ಶಿಯಾಗಿ ಸದಾಶಿವ ಸಂಕಪ್ಪಗೋಳ, ರವಿ ಹುಲಕುಂದ, ರಾಜಕುಮಾರ ಬಾಗಲಕೋಟಿ, ಖಜಾಂಚಿ ಬಸವರಾಜ ಹೊಂಗಲ,

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಲ್ಲಿಕಾರ್ಜುನರಡ್ಡಿ ಗೊಂದಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಚಮಕೇರಿ, ಮಹಾವೀರ ಚಿಂಚಣಿ, ಉಳವಯ್ಯ ಹಿರೇಮಠ, ಮಹಾದೇವ ಪೂಜೇರ, ಸನತ ಜಾರಕಿಹೊಳಿ, ಸೂರ್ಯಕಾಂತ ಪಾಟೀಲ, ಸುಕುಮಾರ ಬನ್ನೂರೆ,

ರುದ್ರೇಶ ಇಟಗಿ, ಕೃಷ್ಣಪ್ಪ ಗಿರೆನ್ನವರ, ಮಹೇಶ ಗಡಕರಿ, ಈರನಗೌಡ ಪಾಟೀಲ, ಗಿರೀಶಪ್ರಸಾದ ರೇವಡಿ, ಸಿದ್ದಲಿಂಗಯ್ಯ ಪೂಜಾರ, ಲಕ್ಷ್ಮೀ ಆರಿಬೆಂಚಿ, ಈರಣ್ಣ ಬುಡ್ಡಾಗೋಳ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಗುರುಸಿದ್ದಪ್ಪ ಪೂಜಾರ ನ.9 ರಂದು ಅಧಿಕೃತವಾಗಿ ಚುನಾವಣೆ ಫಲಿತಾಂಶ ಘೋಷಿಸಲಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!