Select Page

Advertisement

ಬೈಲಹೊಂಗಲ : ಸಾವಿನಲ್ಲೂ ಸಾರ್ಥಕತೆ ಮೆರೆದ ಗುರುಪುತ್ರಪ್ಪ ತುರಮರಿ

ಬೈಲಹೊಂಗಲ : ಸಾವಿನಲ್ಲೂ ಸಾರ್ಥಕತೆ ಮೆರೆದ ಗುರುಪುತ್ರಪ್ಪ ತುರಮರಿ



ಬೈಲಹೊಂಗಲ: ನಗರದ ಮಹಾಂತೇಶ ಚಾಳ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ಗುರುಪುತ್ರಪ್ಪ ಬಸವಪ್ರಭು ತುರಮರಿ(೮೪) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಮೃತರ ಅಂತಿಮ ಇಚ್ಚೆಯಂತೆ ಅವರ ದೇಹವನ್ನು ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟಿಗೆ ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಸಂತಾಪ: ನಗರದ ಗಣ್ಯಮನೆತನದ ಗುರುಪುತ್ರಪ್ಪ ಬಸವಪ್ರಭು ತುರಮರಿ ಅವರ ನಿಧನಕ್ಕೆ ಮುರಗೋಡದ ನೀಲಕಂಠ ಸ್ವಾಮಿಜಿ, ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ, ಹೊಸೂರ ಮಡಿವಾಳೇಶ್ವರ ಸ್ವಾಮಿಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮಿಜಿ,

ಮಡಿವಾಳೇಶ್ವರಮಠದ ಮಡಿವಾಳೇಶ್ವರ ಸ್ವಾಮಿಜಿ, ನಯಾನಗರ ಅಭಿವನ ಸಿದ್ದಲಿಂಗ ಸ್ವಾಮಿಜಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡಗೌಡ್ರ ಹಾಗೂ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!