ಉತ್ತಮ ಪಾಟೀಲ ಏಟಿಗೆ ಕಂಗಾಲಾದ ಜೊಲ್ಲೆ ; ಪಿಕೆಪಿಎಸ್ ಸದಸ್ಯರ ಜೊತೆ ಟೂರ್…?
ಬೆಳಗಾವಿ : ಡಿಸಿಸಿ ನಿರ್ದೇಶಕ ಸ್ಥಾನಕ್ಕೆ ನಿಪ್ಪಾಣಿಯಿಂದ ಸ್ಪರ್ಧೆ ಮಾಡಿರುವ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಉತ್ತಮ ಪಾಟೀಲ ತಲೆನೋವಾಗಿ ಪರಿಣಮಿಸಿದ್ದಾರೆ. ಅವಿರೋಧ ಆಯ್ಕೆ ಹುಮ್ಮಸ್ಸಿನಲ್ಲಿದ್ದವರಿಗೆ ಚುನಾವಣೆ ಎದುರಿಸುವ ಸಂದರ್ಭ ಬಂದಿದೆ.
ಹೌದು ಬರುವ ಅಕ್ಟೋಬರ್ 19 ರಂದು ನಡೆಯಲಿರುವ ಡಿಸಿಸಿ ನಿರ್ದೇಶಕ ಸ್ಥಾನದ ಚುನಾವಣೆಗೆ ನಿಪ್ಪಾಣಿ ಕ್ಷೇತ್ರದಿಂದ ಜೊಲ್ಲೆ ಹಾಗೂ ಪಾಟೀಲ್ ಕಣಕ್ಕಿಳಿದಿದ್ದಾರೆ. ಯಾವಾಗ ಉತ್ತಮ ಪಾಟೀಲ್ ತೀವ್ರ ಪೈಪೋಟಿ ಕೊಡಲು ಪ್ರಾರಂಭಿಸಿದರು ಆಗ ಜೊಲ್ಲೆಗೆ ಸಂಕಷ್ಟ ಎದುರಾಗಿದೆ.
ಡಿಸಿಸಿ ನಿರ್ದೇಶಕ ಹಾದಿ ಸುಗಮಗೊಳಿಸಲು ಜೊಲ್ಲೆ ಜಾರಕಿಹೊಳಿ ಸಹೋದರದ ರಕ್ಷಣೆ ಪಡೆದುಕೊಂಡಿದ್ದಾರೆ. ಬೆಳಗಾವಿ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಪಿಕೆಪಿಎಸ್ ಸದಸ್ಯ ಮತದಾರರ ಜೊತೆ ಸಭೆ ನಡೆಸಿ ಬೆಂಬಲಿಸುವಂತೆ ಕೇಳಿದ್ದಾರೆ.
ಅಷ್ಟೇ ಅಲ್ಲದೆ ಎಲ್ಲಾ ಬಬಲಿತ ಸದಸ್ಯರನ್ನು ಮತದಾನದ ದಿನಾಂಕದ ವರೆಗೂ ಗುಪ್ತ ಜಾಗದಲ್ಲಿ ಇಡುವ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ. ಜೊತೆಗೆ ಕೆಲ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯುವ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಉತ್ತಮ ಪಾಟೀಲ ಏಟಿಗೆ ಜೊಲ್ಲೆ ಕಂಗಾಲಾಗಿದ್ದಂತು ಸುಳ್ಳಲ್ಲ.


