Select Page

ಕನ್ನಡ ದೀಕ್ಷೆ ಪಡೆದ ಯುವ ಮನಸ್ಸುಗಳು ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಬೆಳಗಾವಿ

ಕನ್ನಡ ದೀಕ್ಷೆ ಪಡೆದ ಯುವ ಮನಸ್ಸುಗಳು ; ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಬೆಳಗಾವಿ

ಬೆಳಗಾವಿ : ಕನ್ನಡ ‌ಕೆಲಸಕ್ಕೆ ನಮ್ಮನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲಿ‌ ಕರೆದರೂ ಬರುತ್ತೇವೆ. ಕನ್ನಡಕ್ಕಾಗಿ ಗಲ್ಲಿ, ಗಲ್ಲಿಗೂ ಬರಲು ಹಿಂದೆ ಸರಿಯಲ್ಲ. ಕನ್ನಡಕ್ಕೆ ನಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದೇವೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ‌

ಭಾನುವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ‌ ನಡೆದಿದ್ದ ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾರಂಭದ ಉದ್ದೇಶಿಸಿ ಮಾತನಾಡಿದರು. ಕನ್ನಡ ಭಾಷೆಯ ಹಸಿವಲ್ಲಿ ಯುವಕರು ಇರಬೇಕು. ಕನ್ನಡ ದೀಕ್ಷೆ ಪಡೆದುವರು ಈ ನಾಡಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು. ಇಂತಹ ಅಪರೂಪದ‌ ಕಾರ್ಯಕ್ರಮ ಮಾಡೊರುವ ಕರವೇ ಧನ್ಯವಾದ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಮಾತನಾಡಿ. ಒಂದು‌ ಸಮಯದಲ್ಲಿ ಬೆಳಗಾವಿಯಲ್ಲಿ ಕನ್ನಡ ಬಾವುಟ ಹರಿಸುವುದು ಕಷ್ಟದ ಕೆಲಸವಾಗಿತ್ತು. ಆದರೆ ಇಂದು ಕೆಚ್ಚೆದೆಯ ಕನ್ನಡಿಗರ ಪ್ರಯತ್ನದ ಫಲವಾಗಿ ಲಕ್ಷಾಂತರ ಕನ್ನಡ ಬಾವುಟ ಹಾರಾಡುತ್ತಿರುವುದು ಸಂತದ ಕ್ಷಣ ಎಂದರು.

ಈ ನೆಲದ ಯುವಕರಲ್ಲಿ‌ ಕನ್ನಡ ಜಾಗೃತಿಗೆ ಅಪರೂಪದ ಕಾರ್ಯಕ್ರಮ ಆಯೋಜಿಸಿದ್ದೇವೆ. ಯುವ ಶಕ್ತಿಯ ನರನಾಡಿಯಲ್ಲಿ ಕನ್ನಡದ ಕಿಚ್ಚು ಹಚ್ಚುವ ಕೆಲಸ ನಡೆಯುತ್ತಿದೆ. ಬೆಳಗಾವಿ ನಗರದಲ್ಲಿ ಅಪರೂಪದ ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಖುಷಿ ಇದೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಕನ್ನಡಿಗರು ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕರಿಸಿದರು. ಈ ವೇಳೆ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದವು. ನಗರದ ಅನೇಕ ಕಡೆಗಳಲ್ಲಿ ಕನ್ನಡದ ಬಾವುಟ ರಾರಾಜಿಸುತ್ತಿದ್ದವು.

ಈ ಸಂದರ್ಭದಲ್ಲಿ ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಯುವ ನಾಯಕ ರಾಹುಲ್ ಜಾರಕಿಹೊಳಿ, ಕರವೇ ರಾಜ್ಯ ಸಂಚಾಲಕ ಸುರೇಶ್ ಗವನ್ನವರ, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Advertisement

Leave a reply

Your email address will not be published. Required fields are marked *

error: Content is protected !!