Select Page

Advertisement

ನಾವು ಅಕ್ಕಾ, ತಮ್ಮ ಅದೀವಿ ಬಿಡ್ರಿ ಎಂದರು ಬಿಡದೆ ಹೊಡೆದ ಪುಂಡರು ; ಏಳು ಜನರ ಬಂಧನ

ನಾವು ಅಕ್ಕಾ, ತಮ್ಮ ಅದೀವಿ ಬಿಡ್ರಿ ಎಂದರು ಬಿಡದೆ ಹೊಡೆದ ಪುಂಡರು ; ಏಳು ಜನರ ಬಂಧನ

ಬೆಳಗಾವಿ : ಕುಂದಾನಗರಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು ಹಿಂದೂ ಯುವಕ ಮುಸ್ಲಿಂ ಯುವತಿಯೊಂದಿಗೆ ಕುಳಿತ ಕಾರಣಕ್ಕೆ ಪ್ರೇಮಿಗಳೆಂದು ಭಾವಿಸಿ, 15 ಕ್ಕೂ ಅಧಿಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕರು  ಅಕ್ಕ ಮತ್ತು ತಮ್ಮನನ್ನು ಶೆಡ್ ನಲ್ಲಿ ಕೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿತ್ತು.

ಈ ಘಟನೆಗೆ ಸಂಭಂಧಿಸಿದಂತೆ ಮೊಮ್ಮಹದ್ ಇನಾಮದಾರ್(22), ಆತೀಫ್ ಅಹಮ್ಮದ್ ಶೇಖ(22), ಮೊಹಮ್ಮದ್ ಅಮನ್(27) ಸೈಫಅಲಿ ಮಗ್ದುಮ್(27) ಉಮರ ಬಡೇಗರ್(19) ಅಜಾನ್ ಕಾಲಕುಂದ್ರಿ(19) ರಿಯಾನ್ ರೋಟವಾಲೆ(19) ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟವರು ಸೇರಿದಂತೆ ಒಂಬತ್ತು ಜನ ಆರೋಪಿಗಳನ್ನು‌‌ ಬಂಧಿಸಲಾಗಿದೆ. ಇನ್ನುಳಿದ ‌ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ‌ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

ಹಲ್ಲೆಗೊಳಗಾದ ಕುಟುಂಬಕ್ಕೆ ಧೈರ್ಯ ಹೇಳಿದ ಬಿಜೆಪಿ ಮುಖಂಡರು : ಘಟನೆಯಲ್ಲಿ ಹಲ್ಲೆಗೊಳಗಾದ ಯುವಕ ಹಾಗೂ ಯುವತಿ ಕುಟುಂಬಕ್ಕೆ ಬಿಜೆಪಿ ಹಿರಿಯ ಮುಖಂಡ ಕೆ.ಎಸ್ ಈಶ್ವರಪ್ಪ, ಮಾಜಿ ಶಾಸಕ ಸಂಜಯ್ ಪಾಟೀಲ್, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಹಾಗೂ ವಿಶ್ವಹಿಂದೂ ಪರಿಷತ್ ನ ಕೃಷ್ಣ ಭಟ್ ಸೇರಿದಂತೆ ಅನೇಕರು ಸಾಂತ್ವನ ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!