
ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಕಾರ್ಮಿಕ ನಿರೀಕ್ಷಕ

ಚಿಕ್ಕೋಡಿ : ನಿಪ್ಪಾಣಿ ತಾಲೂಕಾ ಕಾರ್ಮಿಕ ನಿರೀಕ್ಷಕ ಕಳಸಣ್ಣನವರ ಪಾನ್ ಮಸಾಲಾ ತಯಾರಕನಿಂದ 10,000 ರೂ. ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಲೋಕಾಯುಕ್ತ ಇಲಾಖೆಯ ತಂಡ ಸೋಮವಾರ ಸಂಜೆ ನಿಪ್ಪಾಣಿ ತಾಲೂಕು ಕಾರ್ಮಿಕ ನಿರೀಕ್ಷಕ ನಾಗೇಶ ಯಲ್ಲಪ್ಪ ಕಳಸಣ್ಣನವ ಅವರ ಮೇಲೆ ದಾಳಿ ನಡೆಸಿ ಕ್ರಮಕೈಗೊಂಡಿದೆ. ಬೋರಗಾಂವ ಪಟ್ಟಣದ ಪಾನ್ ಮಸಾಲಾ ತಯಾರಕರಿಂದ 10,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ತಂಡವು ರೆಡ ಹ್ಯಾಂಡ್ ಆಗಿ ಕಳಸಣ್ಣನವರನ್ನು ರೆಡ್ ಹ್ಯಾಂಡಯಾಗಿ ಹಿಡದಿದೆ. ಕಳಸಣ್ಣನವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.
ಹೆಚ್ಚಿನ ಮಾಹಿತಿ: ರಾಜು ಪಚ್ಚಾಪುರೆ ಎಂಬುವರು ಬೊರಗಾಂವ ಪಟ್ಟಣದಲ್ಲಿ ಒಂದು ಪಾನ್ ಮಸಾಲಾ ಕಾರ್ಖಾನೆ ಇದೆ. ಅವರು ಕಾಗದಪತ್ರಗಳ ಕೆಲಸಕ್ಕಾಗಿ
‘ಕಾರ್ಮಿಕ ನಿರೀಕ್ಷಕ ಕಳಸಣ್ಣನವರ ಅವರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು.ದಾಖಲೆಯನ್ನು ಪೂರ್ಣಗೊಳಿಸಲು ಇನ್ಸ್‌ಪೆಕ್ಟರ್ ಕಳಸಣ್ಣನವರ ಪಚಾಪುರೆಯಿಂದ 10,000 ರೂ.ಗಳನ್ನು ಕೇಳಿದರು.
ಸೋಮವಾರ ಸಂಜೆ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಪಚಾಪುರೆ ಅವರು ಕಳಸಣ್ಣವರ್ ಅವರು ಬೇಡಿಕೆ ಇಟ್ಟಿದ್ದ ಹಣ ನೀಡಲು ಬಂದಿದ್ದರು. ಇದೇ ವೇಳೆ ಲೋಕಾಯುಕ್ತ ಇಲಾಖೆ ಉಪಾಧೀಕ್ಷಕ ಭರತ ರೆಡ್ಡಿ, ಸಿಪಿಐ ವೆಂಕಟೇಶ ಯಡಹಳ್ಳಿ, ಸಬ್ ಇನ್ಸ್ ಪೆಕ್ಟರ್ ಸಂಗಮೇಶ ಹೊಸಮನಿ, ನೌಕರರಾದ ಬಸು ಹುದ್ದಾರ, ಬಸವರಾಜ ಕುಡೋಳಿ, ಬಸು ಯಡಹಳ್ಳಿ, ಅಭಿಜಿತ್ ಜಮಖಂಡಿ, ಶಶಿ ದೇವರಮನಿ ಬಲೆ ಬೀಸಿ ಕಳಸಣ್ಣನವರ್ ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.