ಕಾಗವಾಡದಲ್ಲಿ ವಕೀಲನಿಂದ ಗರ್ಭಿಣಿ ಹತ್ಯೆ…? ಮಹಿಳೆ ಸಂಶಯಾಸ್ಪದ ಸಾವಿಗೆ ಟ್ವಿಸ್ಟ್..!
ಕಾಗವಾಡ : ತುಂಬು ಗರ್ಭಿಣಿ ಮೇಲೆ ಕಾರು ಹಾಯಿಸಿ ವಕೀಲನೊಬ್ಬ ಕೊಲೆ ಮಾಡಿರುವ ಆರೋಪದ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಗವಾಡ ತಾಲ್ಲೂಕಿನ ಉಗಾರ ಬುದ್ರುಕ್ ಗ್ರಾಮದ ಗರ್ಭಿಣಿ ಮಹಿಳೆ ಚೈತ್ರಾಲಿ ಪ್ರದೀಪ ಕೀರಣಗಿ (22)ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಈ ಕುರಿತು ತನ್ನ ಮಗಳ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ಚೈತ್ರಾಲಿ ತಂದೆ ಅಣ್ಣಾಸಾಬ ಮಾಳಿ ಕಾಗವಾಡ ಠಾಣೆಗೆ ದೂರು ನೀಡಿದ್ದಾರೆ.
ಪ್ರದೀಪ ಹಾಗೂ ಚೈತ್ರಾಲಿ ಒಂದೇ ಗ್ರಾಮದವರು ಸುಮಾರು ವರ್ಷ ಪ್ರೀತಿಸಿ ಮದುವೆಯಾಗಿದ್ದರು ಚೈತ್ರಾಲಿ ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದಳು ಗಂಡನ ಮನೆಯಲ್ಲಿ ಕಿರುಕುಳ ಹಾಗೂ ನಿನ್ನನ್ನು ಕೊಲೆ ಮಾಡುವುದಾಗಿ ಪದೆ ಪದೆ ಪ್ರದೀಪ ಹೇಳುತ್ತಿದ್ದನ್ನು ಅದನ್ನು ನಮ್ಮ ಮುಂದೆ ಹೇಳಿದ್ದಳು ಎಂದು ಪೋಷಕರು ತಿಳಸಿದ್ದಾರೆ.
ರವಿವಾರ ಚೈತ್ರಾಲಿಯನ್ನು ಆಸ್ಪತ್ರೆಗೆ ತೋರಿಸುವುದಾಗಿ ಪತಿ ಪ್ರದೀಪ ಬೈಕ್ ಮೇಲೆ ಕೂರಿಸಿಕೊಂಡು ಶಿರಗುಪ್ಪಿ ಗ್ರಾಮಕ್ಕೆ ಹೋಗಿದ್ದನು ಮಾರ್ಗ ಮಧ್ಯ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಹೋದಾಗ ಶಿರಗುಪ್ಪಿ ಕಡೆಯಿಂದ ಬಂದ ಕಾರು ರಸ್ತೆ ಬದಿಗೆ ನಿಂತ ಚೈತ್ರಾಲಿ ಮೇಲೆ ಹರಿದಿದೆ ರಕ್ತದಲ್ಲಿ ಬಿದ್ದಿದ್ದ ಚೈತ್ರಾಲಿಯನ್ನು ಪತಿ ಪ್ರದೀಪ ಅದೆ ಕಾರಿನಲ್ಲಿ ಮಿರಜ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾನೆ.
ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾಳೆ ಇದನ್ನು ತಿಳಿದ ತಂದೆ ನನ್ನ ಮಗಳನ್ನು ಕಾರು ಹಾಯಿಸಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಅಪಘಾತ ಎಂದು ಬಿಂಬಿಸಿದ್ದಾರೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ತಂದೆ ಅಣ್ಣಾಸಾಬ ಮಾಳಿ ಕಾಗವಾಡ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಪೋಲಿಸರು ಪತಿ ಪ್ರದೀಪ,ಹಾಗೂ ಇನ್ನಿಬ್ಬರು ಮತ್ತು ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಸ್ಥಳಕ್ಕೆ ಪೋಲಿಸ್ ಉಪಾಧಿಕ್ಷಕ ರಾಮನಗೌಡ ಬಸರಗಿ,ಡಿವೈಎಸ್ಪಿ ಪ್ರಶಾಂತ ಮುನ್ನೋಳಿ,ಸಿಪಿಐ ಸಂತೋಷ ಹಳ್ಳೂರ,ಪಿಎಸ್ಐ ರಾಘವೇಂದ್ರ ಖೋತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


