ಬೆಳಗಾವಿ : ನಿರಂತರ ಮಳೆಯಿಂದ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕುಡಚಿ ಸೇತುವೆ ಜಲಾವೃತವಾಗಿದೆ.
ಬಾಗಲಕೋಟೆ ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕುಡಚಿ ಸೇತುವೆ ಜಲಾವೃತಗೊಂಡಿದ್ದು ವಾಹನ ಸಂಚಾರ ಬಂದ್ ಆಗಿದೆ.
ಸಧ್ಯ 1 ಲಕ್ಷ 50 ಸಾವಿರ ಕ್ಯೂಸೇಕ್‌ನಷ್ಟು ಕೃಷ್ಣೆಗೆ ಒಳಹರಿವು ಇದ್ದು, ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.