Select Page

Advertisement

ಹುಕ್ಕೇರಿ ಪೇಟೆಯಲ್ಲಿ ಬಿತ್ತು ಯುವಕನ ಹೆಣ ; ಭೀಕರ ಹತ್ಯೆಗೆ ಏನು ಕಾರಣ…?

ಹುಕ್ಕೇರಿ ಪೇಟೆಯಲ್ಲಿ ಬಿತ್ತು ಯುವಕನ ಹೆಣ ; ಭೀಕರ ಹತ್ಯೆಗೆ ಏನು ಕಾರಣ…?

ಹುಕ್ಕೇರಿ : ಬೆಳಗಿನ ವೇಳೆ ಜನ ಸುತ್ತಾಡುತ್ತಿದ್ದ ವೇಳೆಯಲ್ಲೇ 25 ವರ್ಷದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.

ಮಲ್ಲಿಕ ಹುಸೇನ ಕಿಲ್ಲೇದಾರ ( 25 )ಕೊಲೆಯಾದ ದುರ್ದೈವಿ. ಹುಕ್ಕೇರಿ ಪೇಟೆಯಲ್ಲಿ ಯುವಕ ಮಲ್ಲಿಕ್ ಬೈಕ್ ಮೇಲೆ ತೆರಳುವ ವೇಳೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

ಕೊಲೆಗೆ ಆಸ್ತಿ ವಿವಾದ ಕಾರಣ ಎಂದು ಹೇಳಲಾಗುತ್ತಿದೆ. ಕೊಲೆ ಆರೋಪಿಗಳ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.‌ ಹಗಲಿನ ವೇಳೆ ಈ ಘಟನೆ ನಡೆದಿದ್ದು ಜನರಲ್ಲಿ ಭಯ ಹೆಚ್ಚಿಸಿದೆ.

ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಕೊಲೆಗೈದ ಆರೋಪಿತರಾದ ಶ್ಯಾನೂರಜಮಖಂಡಿ(24) ಮತ್ತು ಬಶೀರ ಕಿಲ್ಲೇದಾರ(38) ಇಬ್ಬರನ್ನು ಪೋಲಿಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!