Select Page

Advertisement

ಗಡಿಯಲ್ಲಿ ಪುಂಡಾಟ ; ಬಸ್ಸುಗಳಿಗೆ ಕಲ್ಲು ತೂರಿದ ಕಿಡಿಗೇಡಿಗಳು

ಗಡಿಯಲ್ಲಿ ಪುಂಡಾಟ ; ಬಸ್ಸುಗಳಿಗೆ ಕಲ್ಲು ತೂರಿದ ಕಿಡಿಗೇಡಿಗಳು

ಬೆಳಗಾವಿ : ರಾಜ್ಯ ರಸ್ತೆ ಸಾರಿಗೆಗೆ ಸೇರಿದ್ದ ಎರಡು ಬಸ್ ಹಾಗೂ ಮಹಾರಾಷ್ಟ್ರಕ್ಕೆ ಸೇರಿದ್ದ ಒಂದು ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದು ಓರ್ವ ವ್ಯಕ್ತಿ ಗಾಯಗೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ಹುಕ್ಕೇರಿ ಅಗ್ನಿಶಾಮಕದಳದ ವಾಹನ ಚಾಲಕ  ರಮೇಶ ಚಿವಟೆ (55) ತಲೆಗೆ ಗಾಯವಾಗಿದ್ದು,  ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹುಕ್ಕೇರಿ ಯಿಂದ ಬೆಳಗಾವಿಗೆ ಹೊರಟಿದ್ದ ರಾಜ್ಯ ರಸ್ತೆ ಸಾರಿಗೆ ಎರಡು ಬಸ್ ಹಾಗೂ ಮಹಾರಾಷ್ಟ್ರಕ್ಕೆ ಸೇರಿದ್ದ ಒಂದು ‌ಬಸ್ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿ ಸಂಚರಿಸುತ್ತಿದ್ದಾಗ  ಕಿಡಿಗೇಡಿಗಳು  ಕಲ್ಲು ಎಸೆದಿದ್ದಾರೆ.

ಈಗಾಗಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಭೇಟಿ‌‌ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!