ಪತ್ರಕರ್ತ ಇಟ್ನಾಳಮಠ ನಿಧನಕ್ಕೆ ಡಾ. ಪ್ರಭಾಕರ್ ಕೋರೆ ಶೋಕ
ಅಥಣಿ : ಹಿರಿಯ ಪತ್ರಕರ್ತ ಇಟ್ನಾಳಮಠ ಅವರು ನಿಧನ ಹೊಂದಿರುವುದು ತೀವ್ರ ದುಃಖವನ್ನುಂಟು ಮಾಡಿದೆ ಎಂದು ಕೆ ಎಲ್ ಈ ಸಂಸ್ಥೆಯ ಕಾರ್ಯಧ್ಯಕ್ಷ ಪ್ರಭಾಕರ್ ಕೋರೆ ಅವರು ದುಃಖ ವ್ಯಕ್ತಪಡಿಸಿದ್ದಾರೆ.
ತಮ್ಮ ನೇರ ನಡೆ ನುಡಿಗಳಿಂದ ಹೆಸರಾಗಿದ್ದ ಇಟ್ನಾಳಮಠರು ಒಬ್ಬ ಉತ್ತಮ ಪತ್ರಕರ್ತರಾಗಿ ಕೆಲಸವನ್ನು ನಿರ್ವಹಿಸಿದ್ದರು. ಸಮಾಜ ಚಿಂತಕರಾಗಿ ಹಲವಾರು ನೆಲೆಗಳಲ್ಲಿ ಸೇವೆಯನ್ನು ನೀಡಿದ್ದರು. ಅವರ ವಿಚಾರಗಳು ನಿಷ್ಠರಾಗಿರುತ್ತಿದ್ದವು. ಅವರ ಸ್ಪಷ್ಟವಾದಿಯಾಗಿದ್ದರು. ರಾಜಕೀಯ ವಿಶ್ಲೇಷಕರು ಆಗಿದ್ದರು.
ಕೆಎಲ್ಇ ಸಂಸ್ಥೆ ಅಭಿಮಾನಿಗಳಾಗಿದ್ದ ಅವರು ಸಂಸ್ಥೆ ಬೆಳವಣಿಗೆ, ಹಲವಾರು ಸಭೆ ಸಮಾರಂಭಗಳ ವರದಿಗಳನ್ನು ಅತ್ಯಂತ ನಿಖರವಾಗಿ ಬರೆದು ಗಡಿ ಭಾಗದಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಜನತೆಗೆ ಎತ್ತಿ ತೋರಿಸಿದ್ದರು. ಅಥಣಿ ಭಾಗದ ಸಂಖ್ಯೆವರದಿಗಳನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಒಬ್ಬ ಕ್ರಿಯಾಶೀಲ ವ್ಯಕ್ತಿ, ಸೃಜನಶೀಲ ಬರಹಗಾರ ನಿಧನರಾಗಿರುವುದು ಮಾಧ್ಯಮ ಕ್ಷೇತ್ರಕ್ಕೆ ತುಂಬಾ ನಷ್ಟ ಉಂಟಾಗಿದೆ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಕೆಎಲ್ಇ ಸಂಸ್ಥೆಯ ಪರವಾಗಿ ಪ್ರಾರ್ಥಿಸಿದ್ದಾರೆ.
***********
ಮಂಗಳವಾರ ಬೆಳಿಗ್ಗೆ ಅಂತ್ಯಕ್ರಿಯೆ :
ಪತ್ರಕರ್ತ,ಸಾಹಿತಿ,ಸಾಮಾಜಿಕ,ಧಾರ್ಮಿಕ ಸೇವಾನಿಷ್ಠರಾಗಿದ್ದ ಚನ್ನಯ್ಯಾ,ಅಣ್ಣಯ್ಯಾ ಇಟ್ನಾಳಮಠ(62) ಉತ್ತಮ ಬರಹಗಾರ,ಮಾತುಗಾರನಾಗಿ ಎಲ್ಲರಿಗೂ ಅಚ್ಚುಮೆಚ್ಚಿನ ಪತ್ರಕರ್ತರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಹಲವಾರು ಪ್ರಶಸ್ತಿ,ಪುರಸ್ಕಾರ ಪಡೆದ ಅವರು ಸಾಹಿತಿಯಾಗಿ ಹಲವು ಕೃತಿಗಳನ್ನ ರಚಿಸಿದರು,ಪತ್ರಕರ್ತರಾಗುವ ಮೊದಲು ವಿಮೋಚನಾ ಸಂಸ್ಥೆ ಮಾಡುವ ಸಮಾಜ ಸೆವೆಯಲ್ಲಿ ತಮ್ಮನ್ನ ತಾವುಗಳು ತೊಡಗಿಸಿಕೊಂಡು ಸುಮಾರು 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ,ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲಿ ಸೊಮವಾರ ೧೪ ರಂದು ನಿಧನರಾಗಿದ್ದು,ತಾಯಿ,ಪತ್ನಿ,ಓರ್ವ ಪುತ್ರ ಇದ್ದಾರೆ.
ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ದಿದರು ಇವರ ಅಗಲಿಕೆಯಿಂದ ಸಾಕಷ್ಟು ತುಂಬಲಾರದ ಹಾನಿ ಪತ್ರಿಕಾ ರಂಗಕ್ಕೆ ಆಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮಿಜಿ,ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಜಿ,ಶೆಟ್ಟರಮಠದ ಮರುಳಸಿದ್ದ ಸ್ವಾಮಿಜಿ, ಮಹಾಂತೆಶ ಕವಟಗಿಮಠ,ಶಾಸಕ ಲಕ್ಷö್ಮಣ ಸವದಿ,ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ,ಶಹಜಹಾನ ಡೊಂಗರಗಾವ,ಗಣ್ಯರಾದ ಗಜಾನನ ಮಂಗಸೂಳಿ,ಎಸ್.ಕೆ.ಬುಟಾಳಿ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ 08 ಗಂಟೆಗೆ ಅಥಣಿ ಗಚ್ಚಿನ ಮಠದ ರುದ್ರಭೂಮಿಯಲ್ಲಿ ನೆರವೇರಲಿದೆ.


