Select Page

Advertisement

5 ಸಾವಿರಕ್ಕೆ ರಾಯಬಾಗದಲ್ಲಿ ಡೆಡ್ಲಿ ಮರ್ಡರ್ ; ಸಿಂಗರ್ ಮಾರುತಿಯ ಬರ್ಬರ ಹತ್ಯೆ

5 ಸಾವಿರಕ್ಕೆ ರಾಯಬಾಗದಲ್ಲಿ ಡೆಡ್ಲಿ ಮರ್ಡರ್ ; ಸಿಂಗರ್ ಮಾರುತಿಯ ಬರ್ಬರ ಹತ್ಯೆ

ರಾಯಬಾಗ : ಕೇವಲ ಐದು ಸಾವಿರ ರೂ. ಹಣಕ್ಕೆ ಯುವಕನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮಾರುತಿ ಲಟ್ಟಿ ( 22 ) ಹತ್ಯೆಯಾದ ಯುವಕ. ಕಳೆದ ನಾಲ್ಕು ದಿನಗಳ ಹಿಂದೆ ಸ್ನೇಹಿತರ ಜೊತೆ ಬೈಕ್ ಮೇಲೆ ತೆರಳುವ ವೇಳೆ 11 ಜನರ ತಂಡ ಬರ್ಬರವಾಗಿ ಹತ್ಯೆ ಮಾಡಿದ್ದು ನಂತರ ಯುವಕನ ಮೃತದೇಹದ ಮೇಲೆ ವಾಹನ ಚಲಾಯಿಸಿ ಕ್ರೌರ್ಯ ಮೆರೆದಿದ್ದಾರೆ.

ಮೃತ ಯುವಕ ಮಾರುತಿ ಲಟ್ಟಿ ಕೆಲ ದಿನಗಳ ಹಿಂದೆ ಈರಪ್ಪ ಅಕ್ಕಿವಾಟೆ ಎಂಬಾತನ ಬಳಿ 50 ಸಾವಿರ ರೂ. ಸಾಲ ಪಡೆದಿದ್ದ. ಕೆಲಸಕ್ಕೆ ಬರುತ್ತೇನೆ ಎಂದು ಹೇಳಿದ್ದ ಮಾರುತಿ ಉತ್ತರ ಕರ್ನಾಟಕ ಶೈಲಿಯಲ್ಲಿ ಹಾಡು ಹಾಡುವ ಮೂಲಕ ಹೆಸರು ಗಳಿಸಿದ್ದ.

ಕೆಲಸಕ್ಕೆ ಬರಲಾಗದೆ ಈತ 45 ಸಾವಿರ ಹಣವನ್ನು ವಾಪಸ್ ನೀಡಿದ್ದ. ಇನ್ನುಳಿದ ಐದು ಸಾವಿರ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಈರಪ್ಪ ಗ್ಯಾಂಗ್ ಕಟ್ಟಿಕೊಂಡು ಮಾರುತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.‌

ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು ಸಿದ್ದರಾಮ ಒಡೆಯರ, ಹಾಗೂ ಆಕಾಶ ಪೂಜಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!