ನೂತನ ಅಂಬ್ಯುಲೆನ್ಸ್ ಸೇವೆಗೆ ವಿಜಯೇಂದ್ರ ಚಾಲನೆ
ಬೆಳಗಾವಿ : ಗರ್ಭಿಣಿ ತಾಯಂದಿರಿಗಾಗಿ ಬೆಳಗಾವಿಯ ಅಂತರ್ಯಾಮಿ ಫೌಂಡೇಶನ್ ವತಿಯಿಂದ ಪ್ರಾರಂಭವಾದ ಅಂಬ್ಯುಲೆನ್ಸ್ ಸೇವೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಚಾಲನೆ ನೀಡಿದರು.
ನೂತನ ಅಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಇವರು. ಬಡವರು ಹಾಗೂ ನಿರ್ಗತಿಕರ ಸೇವೆಗೆ ಸದಾಕಾಲವೂ ತುಡಿಯುವ ಅಂತರ್ಯಾಮಿ ಫೌಂಡೇಶನ್ ಅಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ್ದು ಸಂತಸದ ವಿಷಯ. ಇಂದಿನ ಯುವಕರು ಸಮಾಜಸೇವೆಯಲ್ಲಿ ತೊಡಗಿಕೊಂಡರೆ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ ಎಂದರು.
ಅಂತರ್ಯಾಮಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಗಸ್ತಿ ಮಾತನಾಡಿ. ಗ್ರಾಮೀಣ ಭಾಗದ ರೋಗಿಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಅಂಬ್ಯುಲೆನ್ಸ್ ಸೇವೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಚಾಲನೆ ನೀಡಿದ್ದು ಸಂತೋಷದ ವಿಷಯ. ಮುಂಬರುವ ದಿನಗಳಲ್ಲಿ ನಮ್ಮ ಫೌಂಡೇಶನ್ ನಿಂದ ಮತ್ತಷ್ಟು ಸಮಾಜಪರ ಕಾರ್ಯ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಮಲ್ಲಿಕಾರ್ಜುನ ಬಾಳಿಕಾಯಿ, ಮಹಾಂತೇಶ್ ವಕ್ಕುಂದ, ತಮ್ಮೆಶ್ ಗೌಡ ಪ್ರಸಾದ ದೇವರಮನೆ, ಈರಣ್ಣಾ, ದೀಪಕ ದಡೆಸುರ ಹಾಗೂ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.


