Select Page

Advertisement

ರಾಯಬಾಗ ವಕೀಲನನ್ನು ಕೊಂದು ಮೃತದೇಹ ಸುಟ್ಟ ದುರುಳರು ; ಕೊಲೆಯ ರೋಚಕ ಸತ್ಯ ಬಯಲು

ರಾಯಬಾಗ ವಕೀಲನನ್ನು ಕೊಂದು ಮೃತದೇಹ ಸುಟ್ಟ ದುರುಳರು ; ಕೊಲೆಯ ರೋಚಕ ಸತ್ಯ ಬಯಲು

ಬೆಳಗಾವಿ : ನ್ಯಾಯವಾದಿಯೊಬ್ಬರನ್ನು ಆಸ್ತಿ ವಿಷಯವಾಗಿ ಸುಪಾರಿ ಪಡೆದು ಅಪಹರಿಸಿ ಮಾರಕಾಸ್ತ್ರದಿಂದ ಹತ್ಯೆ ಮಾಡಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣ ಒಂದನ್ನು ಜಿಲ್ಲೆಯ ರಾಯಭಾಗ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಗುಳೇದ ಅವರು, ಈ ಸುಪಾರಿ ಕೊಲೆ ಪ್ರಕರಣದಲ್ಲಿನ 10 ಆರೋಪಿತರ ಪೈಕಿ ಒಟ್ಟು ಆರೋಪಿಗಳನ್ನು ರಾಯಬಾಗ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನಿಬ್ಬರ ಆರೋಪಿತರ ಶೋಧಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದರು.

ಕಳೆದ 2025ರ ಏಪ್ರಿಲ್ 29ರಂದು ಸಂಜೆ 4 ಸವಸುದ್ದಿ ಗ್ರಾಮದ ರೇಖಾ ಪಾಟೀಲ ಅವರು ರಾಯಬಾಗ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಪತಿ ಸಂತೋಷ ಅಶೋಕ ಪಾಟೀಲ ಇವರು ವೃತ್ತಿಯಲ್ಲಿ ನ್ಯಾಯವಾದಿ ಇದ್ದು, ನ್ಯಾಯಾಲಯಕ್ಕೆ ಹೋಗುವಾಗ ಅಪಹರಣಗೊಂಡಿರುವುದಾಗಿ ದೂರು ನೀಡಿದರು. ಪ್ರಕರಣವನ್ನು ಅಪರಾಧ ಸಂಖ್ಯೆ 123/2025 ರಂತೆ ಬಿಎನ್‌ಎಸ್ ಕಲಂ 137(2) ಅಡಿಯಲ್ಲಿ ದಾಖಲಿಸಲಾಗಿತ್ತು.

ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಹಾಗೂ ಹೆಚ್ಚುವರಿ ಎಸ್‌ಪಿ ಬೆಳಗಾವಿ, ಅಥಣಿಯ ಡಿವೈಎಸ್‌ಪಿ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಬಿ.ಎಸ್. ಮಂಟೂರ ನೇತೃತ್ವದ ತಂಡವು ತ್ವರಿತ ತನಿಖೆ ಆರಂಭಿಸಿ, ನಾಪತ್ತೆಯಾದವನಿಗಾಗಿ ಹುಡುಕಾಟ ಆರಂಭಿಸಲಾಗಿತ್ತು.

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಸಿ ತನಿಖೆ ನಡೆಸಿದಾಗ ಶಂಕಿತ ಆರೋಪಿ ಉದಯಕುಮಾರ ಮುಶೆನ್ನವರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆಯ ಹಿಂದೆ ಆಸ್ತಿವಿವಾದ ಇರುವುದು ಪತ್ತೆಯಾಗಿದೆ.

ಹತ್ಯೆಗೆ 1 ಎಕರೆ 4 ಗುಂಟೆ ಆಸ್ತಿ ವ್ಯಾಜ್ಯ ಕಾರಣ :
ಮೃತ ಸಂತೋಷ ಪಾಟೀಲ ಅವರು ಶಿವಗೌಡ ಪಾಟೀಲ ವಿರುದ್ಧ 1 ಎಕರೆ 4 ಗುಂಟೆ ಭೂಮಿ ಕುರಿತು ಸಿವಿಲ್ ದಾವೆ ದಾಖಲಿಸಿದ್ದರು. ಇದರಿಂದ ಸಿಟ್ಟಿಗೆದ್ದ ಶಿವಗೌಡ ಪಾಟೀಲ ಅವರು, ತನ್ನ ಕಿರಿಯ ವಕೀಲರು ಮತ್ತು ಮತ್ತಿತರರ ಸಹಾಯದಿಂದ 14 ಲಕ್ಷ ರೂ. ಸುಪಾರಿ ನೀಡಿ ಸಂತೋಷ ಹತ್ಯೆಗೆ ಸ್ಕೆಚ್ ರೂಪಿಸಲಾಗಿತ್ತು.

2025 ರ ಏಪ್ರಿಲ್ 29ರಂದು, ಸಂತೋಷ ಪಾಟೀಲ ಸವಸುದ್ದಿಯಿಂದ ದ್ವಿಚಕ್ರ ಮೇಲೆ ರಾಯಬಾಗಕ್ಕೆ ಹೊರಡುತ್ತಿದ್ದಾಗ, ಆರೋಪಿಗಳು ಕಾರು ಮೂಲಕ ತಡೆದು ಸಂತೋಷೆನ್ನು ಅಪಹರಿಸಿದರು. ನಂತರ, ಅವರನ್ನು ರಾಮನಗರ ಮೂಲಕ ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಗಣೇಶಗುಡಿಗೆ ಕರೆದೊಯ್ದು, ತಲವಾರದಿಂದ ತಲೆಗೆ ಹೊಡೆದು ಹತ್ಯೆಗೈದು, ಮೃತದೇಹದ ಗುರುತು ಪತ್ತೆಯಾಗದಂತೆ ಮೈಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು.

ಸಂತೋಷ ಪತ್ನಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನ್ಯಾಯವಾದಿ ಶಿವಗೌಡ ತನ್ನ ಸಹಚರರಿಗೆ 14 ಲಕ್ಷ ರೂ. ಸುಪಾರಿ ಆಮಿಷ ನೀಡಿ ಕೊಲೆ ನಡೆಸಿರುವುದು ಸ್ಪಷ್ಟವಾಗಿದೆ. ಕೊಲೆ ನಡೆಸಿದ ಸ್ಥಳದಲ್ಲಿ ಪತ್ತೆಯಾದ ಮೂಳೆಗಳ ಡಿಎನ್‌ಎ ಪರೀಕ್ಷೆಯಲ್ಲಿ, ಅವು ಸಂತೋಷ ಪಾಟೀಲ ಅವರದ್ದೇ ಎಂದು ದೃಢಪಟ್ಟಿದೆ.

ಕೊಲೆಗಾಗಿ ಬಳಸಿದ ಮಾರಕಾಸ್ತç ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ನಡೆಸಿದವರಿಗೆ ಈಗಾಗಲೇ 11 ಲಕ್ಷ ರೂ. ನೀಡಲಾಗಿದ್ದು, ಉಳಿಕೆ 3 ಲಕ್ಷವನ್ನು ಶೀಘ್ರ ನೀಡುವುದಾಗಿ ಶಿವಗೌಡ ಭರವಸೆ ನೀಡಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಕೊಲೆ ಪ್ರಕರಣದಲ್ಲಿ ನ್ಯಾಯವಾದಿಯಾದ ಶಿವಗೌಡ ಬಸಗೌಡ ಪಾಟೀಲ, ಭರತ ಕಲ್ಲಪ್ಪ ಕೋಳಿ, ಕಿರಣ ವಸಂತ ಕೆಂಪವಾಡೆ, ಸುರೇಶ ಭೀಮಪ್ಪ ನಂದಿ, ಉದಯಕುಮಾರ ಮುಶೆನ್ನವರ, ಸಂಜಯಕುಮಾರ ಹಳಬನ್ನವರ, ರಾಮು ದಂಡಾಪೂರೆ, ಮಂಜುನಾಥ ತಳವಾರ ಎಂಬುವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ನಂ. 4 ಮಹಾವೀರ ಸುಭಾಸ ಹಂಜೆ ಹಾಗೂ ಆರೋಪಿ ನಂ.10 ನಾಗರಾಜ ಪರಸಪ್ಪ ನಾಯಕ ತಲೆಮರೆಸಿಕೊಂಡಿದ್ದು, ಇವರಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ರಾಯಬಾಗ ಪೊಲೀಸರ ಈ ಮಿಂಚಿನ ಕಾರ್ಯಾಚರಣೆಗೆ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಹಾಗೂ ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!