ಗೋ ರಕ್ಷಕರ ಮೇಲೆ ಹಲ್ಲೆ ; ಪ್ರತಿಭಟನೆಗೆ ಅವಕಾಶ ಇಲ್ಲ ; ಎಸ್ಪಿ
ಬೆಳಗಾವಿ : ಗೋವು ರಕ್ಷಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಚಲೋ ಇಂಗಳಿಗೆ ಕರೆ ನೀಡಿರುವ ಹಿಂದೂಪರ ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಹೇಳಿದರು.
ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಹಲ್ಲೆಗೊಳಗಾದ ಐವರ ಪೈಕಿ ಓರ್ವ ಗಡಿಪಾರಾದ ರೌಡಿಶೀಟರ್ ಇದ್ದಾನೆ. ಗಡಿಪಾರು ಆದರು ಕಾನೂನು ಮೀರಿ ಆತ ಸ್ವಕ್ಷೇತ್ರಕ್ಕೆ ಮರಳಿದ್ದು ಕಾನೂನು ರೀತಿಯಲ್ಲಿ ಅಪರಾಧ. ಈ ಕುರಿತು ಆ ವ್ಯಕ್ತಿ ತಮ್ಮ ಸಂಘಟನೆಗಳ ಹೆಸರು ದುರ್ಬಳಕೆ ಮಾಡಿಕೊಂಡಿದ್ದನ್ನು ಮೊದಲು ಗಮನಿಸಬೇಕು. ಇದೇ ಕಾರಣಕ್ಕೆ ನಾವು ಸಂಘಟನೆಗಳಿಗೆ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಲ್ಲೆ ಘಟನೆ ನಂತರ ನೊಂದವರು ಯಾವುದೇ ಪ್ರಕರಣ ದಾಖಲಿಸಿಲ್ಲ. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ ಗೋ ರಕ್ಷಣೆ ಹೆಸರಿನಲ್ಲಿ ವ್ಯಕ್ತಿಯ ಮನೆಗೆ ನುಗ್ಗಿದ ಹಿನ್ನಲೆಯಲ್ಲಿ ಈ ಕುರಿತು ಹಲ್ಲೆಗೊಳಗಾಗದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದರು.
ಶ್ರೀರಾಮಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದರ ಎಲ್ಲರೂ ಮುಸ್ಲಿಂ ಸಮುದಾಯದವರಲ್ಲ. ಇಲ್ಲಿ ಹಿಂದೂಗಳು ಇದ್ದಾರೆ. ಸಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಹಲ್ಲೆಗೊಳಗಾಗದವರು ಪ್ರಕರಣ ದಾಖಲಿಸಲು ಮುಂದಾದರೂ ಪೊಲೀಸರು ದಾಖಲಿಸಿಕೊಂಡಿಲ್ಲ ಎಂಬ ಆರೋಪ ಸುಳ್ಳು ಎಂದರು.
ಹುಕ್ಕೇರಿ ತಾಲೂಕಿನ ಬೆಳವಿ ಗೋ ಶಾಲೆಯಿಂದ ಗೋವುಗಳನ್ನ ಇಂಗಳಿ ಗ್ರಾಮಕ್ಕೆ ವಾಪಸ್ಸು ಕರೆದೋಯುತ್ತಿದ್ದ ಮುಸ್ಲಿಂ ದಲ್ಲಾಳಿಗಳನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರಶ್ನೆ ಮಾಡಿರುವುದಕ್ಕೆ ರೊಚ್ಚಿಗೆದ್ದ ಮುಸ್ಲಿಂ ದಲ್ಲಾಳಿಗಳು, 5 ಜನ ಶ್ರೀ ರಾಮ ಸೇನೆ ಕಾರ್ಯಕರ್ತರ ಮೇಲೆ ಮಾರಣಾಂತಿಕವಾಗಿ ಮನಬಂದಂತೆ ,ಕಟ್ಟಿಗೆಯಿಂದ ಹಲ್ಲೆ ಮಾಡಿದ್ದರ ವೀಡಿಯೋ ವೈರಲ್ ಆಗಿತ್ತು.


