Select Page

Advertisement

ಮಹಾರಾಣಾ ಪ್ರತಾಪ್‌ ಅವರ ಶೌರ್ಯ ಎಲ್ಲರಿಗೂ ಸ್ಪೂರ್ತಿ : ಡಾ‌. ಸೋನಾಲಿ

ಮಹಾರಾಣಾ ಪ್ರತಾಪ್‌ ಅವರ ಶೌರ್ಯ ಎಲ್ಲರಿಗೂ ಸ್ಪೂರ್ತಿ : ಡಾ‌. ಸೋನಾಲಿ


ಬೆಳಗಾವಿ : ಇಲ್ಲಿನ ಕಪಿಲೇಶ್ವರದ ಹನುಮಾನ್ ದೇವಸ್ಥಾನದಲ್ಲಿ ರಾಜಪೂತ ಸಮಾಜದ ವತಿಯಿಂದ ಶ್ರೀ ಮಹಾರಾಣಾ ಪ್ರತಾಪ್ ಸಿಂಹರ 485 ನೇ ಜಯಂತಿಯನ್ನು ಭಾನುವಾರ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಸೋನಾಲಿ ಸರ್ನೋಬತ್, ಅಪ್ರತಿಮ ವೀರರಾಗಿ ಶೌರ್ಯದಿಂದ ಮೆರೆದ ಮಹಾರಾಣಾ ಪ್ರತಾಪ್‌ ಸಿಂಹರ ಬದುಕು ನಮಗೆ ಆದರ್ಶ. ಮುಂದಿನ ಪೀಳಿಗೆಗೆ ಅವರ ಶೌರ್ಯದ ಕಥೆ ಹೇಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ರಾಜಪೂತ ಸಮಾಜದ ಅಧ್ಯಕ್ಷ ಅಭಯಸಿಂಗ್ ಠಾಕೂರ್ ಅವರು ದೇವಸ್ಥಾನಾಭಿವೃದ್ಧಿ, ಮಂಗಳ ಕಾರ್ಯಾಲಯ ಹಾಗೂ ವಿದ್ಯಾರ್ಥಿ ವಸತಿಗೃಹಗಳ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮುಂದಿನ ಸಾಮಾನ್ಯ ಸಭೆಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರತಿಭಾ ರಾಜಪೂತ, ಜಯಶ್ರೀ ರಾಜಪೂತ, ಸಂಗೀತಾ ಠಾಕೂರ್, ರಶ್ಮಿ ರಾಜಪೂತ, ಪೂಜಾ ರಾಜಪೂತ, ನೀಲಂ ರಾಜಪೂತ, ಮತ್ತು ಸಮುದಾಯದ ಪ್ರಮುಖರು ಅರ್ಜುನ್‌ಸಿಂಗ್, ಸುನೀಲಸಿಂಗ್, ಸಂಜಯಸಿಂಗ್, ರೂಪೇಶಸಿಂಗ್, ಜಯಸಿಂಗ್, ಧೀರಜ್‌ಸಿಂಗ್, ಪವನ್‌ಸಿಂಗ್ ಅವರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!