Select Page

Advertisement

ಕೊರೊನಾಗೆ ಬೆಳಗಾವಿಯಲ್ಲಿ ಮೊದಲ ಸಾವು

ಕೊರೊನಾಗೆ ಬೆಳಗಾವಿಯಲ್ಲಿ ಮೊದಲ ಸಾವು

ಬೆಳಗಾವಿ : ಕೊರೊನಾ ಮಹಾಮಾರಿಗೆ ಬೆಳಗಾವಿಯಲ್ಲಿ ಮೊದಲ ಬಲಿಯಾಗಿದ್ದು, ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ವರ್ಷದ ವೃದ್ಧ ಬಲಿಯಾಗಿದ್ದಾರೆ‌.
ಬುಧವಾರದಂದು ಕೋವಿಡ್ ಪಾಸಿಟಿವ್ ಎಂದು ತಪಾಸಣೆಯಲ್ಲಿ ಕಂಡು ಬಂದಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವೃದ್ಧ ಮೃತಪಟ್ಟಿದ್ದಾನೆ.

ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿತ್ತು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಚಿಕಿತ್ಸೆ ಗೆ ಅಂತಾ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.

ಕೊವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್ ಎಂದು ಗೊತ್ತಾದ ತಕ್ಷಣವೇ ಕೋವಿಡ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಿಸದ ಕಾರಣ 70 ವರ್ಷದ ವೃದ್ಧ ಮೃತಪಟ್ಟಿದ್ದಾನೆ. ಕೊವಿಡ್ ನಿಯಮಾವಳಿ ಪ್ರಕಾರವೇ ರಾತ್ರಿಯೇ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೆರಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!