ಶುಶ್ರೂಷಕರಿಲ್ಲದೆ ಆಸ್ಪತ್ರೆ ನಿರ್ವಹಿಸುವುದು ಅಸಾಧ್ಯ : ಡಾ. ಪ್ರಭಾಕರ್ ಕೋರೆ
ಬೆಳಗಾವಿ : ಕೆಎಲ್ಇ ಆಸ್ಪತ್ರೆ ಆಧುನಿಕ ತಂತ್ರಜ್ಞಾನ ಹೊಂದಿರುವ ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದಾಗಿದೆ. ಶುಶ್ರೂಷಕರಿಲ್ಲದೆ ಆಸ್ಪತ್ರೆಗಳು ಕಾರ್ಯನಿರ್ವಹಿಸುದು ಅಸಾಧ್ಯ ಹಾಗೂ ಸಂಸ್ಥೆಯು ಹತ್ತು ಶುಶ್ರೂಷಾ ಮಹಾವಿದ್ಯಾಲಯಗಳನ್ನು ತನ್ನದೆ ಆಸ್ಪತ್ರೆಯೊಂದಿಗೆ ನಡೆಸುತ್ತಿದೆ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಕೆಎಲ್ಇ ವಿಶ್ವವಿದ್ಯಾಲಯ ಆವರಣದಲ್ಲಿ
ಮಕ್ಕಳ ಶುಶ್ರೂಷಾ ಉತ್ತಮ ಆರೈಕೆಗಾಗಿ ಅಧ್ಯಯನ ಮತ್ತು ಸಂಶೋಧನೆ ವಿಷಯದ ಕುರಿತು ಜರುಗಿದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಶುಶ್ರೂಷಕರ ಕೌಶಲ್ಯಗಳನ್ನು ಹೆಚ್ಚಿಸಲು ಈ ರೀತಿಯ ಸಮ್ಮೇಳನಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಸಮ್ಮೇಳನದ ಉದ್ಘಾಟನೆ ಮಾಡಿದ್ದು ಅತ್ಯಂತ ಖುಷಿ ಸಂಗತಿ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಯೋಜನಾ ಸಚಿವಾಲಯದ ನರ್ಸಿಂಗ್ ಸಲಹೆಗಾರರಾದ ಡಾ. ದೀಪಿಕಾ ಸೆಸಿಲ್ ಖಾಖಾ ಮಾತನಾಡಿ. ಅಧ್ಯಯನ ಮತ್ತು ಸಂಶೋಧನೆಯು, ವೈದ್ಯಕೀಯ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಅಭ್ಯಾಸವು ಎಂದಿಗೂ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುವುದಿಲ್ಲ ಆದರೆ ಪರಿಪೂರ್ಣವಾದ ಅಭ್ಯಾಸವು ನಮ್ಮನ್ನು ಯಶಸ್ವಿಗೊಳಿಸುತ್ತದೆ. ಮೌಲ್ಯಯುತ ಸಮ್ಮೆಳನ ಆಯೋಜಿಸಿದ್ದಕ್ಕೆ ಸಂಸ್ಥೆಯನ್ನು ಅಭಿನಂದಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ನಿತಿನ್ ಗಂಗನೆ, ಕರಾಡ ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ವೈಶಾಲಿ ಮೋಹಿತೆ ಮಾತನಾಡಿದರು. ಪ್ರೊ. ವಿರೇಶಕುಮಾರ ನಂದಗಾವ ಪರಿಚಯ ಭಾಷಣ ಮಾಡಿದರು. ಈ ಸಂಧರ್ಭದಲ್ಲಿ ಮಕ್ಕಳ ಶುಶ್ರೂಷಾ ಉತ್ತಮ ಆರೈಕೆಗಾಗಿ ಅಧ್ಯಯನ ಮತ್ತು ಸಂಶೋಧನೆಯ ಕರಿತಾದ ಸ್ಮರಣಿಕೆ ಮತ್ತು ಮಕ್ಕಳ ಆರೋಗ್ಯ ಮೌಲ್ಯಮಾಪನ ಕುರಿತು ಅಭಿವೃದ್ದಿಪಡಿಸಿದ ಮೊಬೈಲ ಅಪ್ಲಿಕೆಷನ ಅನ್ನು ಬಿಡುಗಡಿಗೊಳಿಸಲಾಯಿತು.
ಎರಡು ದಿನಗಳವರೆಗೆ ನಡೆಯುವ ಈ ಸಮ್ಮೇಳನದಲ್ಲಿ ಉಪನ್ಯಾಸ, ಫಲಕ ಚರ್ಚೆ, ಪೇಪರ್ ಹಾಗು ಪೊಸ್ಟರ್ ಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಳ್ಳಲಿವೆ. ಮಹಾರಾಷ್ಟ್ರ, ಗೋವಾ, ಗುಜರಾತ, ತೆಲಂಗಾಣ, ಉತ್ತರ ಪ್ರದೇಶ, ಪಂಜಾಬ, ಮತ್ತು ತಮಿಳುನಾಡು ರಾಜ್ಯಗಳಿಂದ ಸುಮಾರು 520 ಪ್ರತಿನಿಧಿಗಳು ಸೇರಿದಂತೆ ಗಣ್ಯರು ಭಾಗವಹಿಸಿದ್ದಾರೆ.


