Select Page

ಸೊಸೆಗೆ ನಾಟಿ ಕೋಳಿ, ರೊಟ್ಟಿ ಇಷ್ಟ ; ಸೋಫಿಯಾ ಮಾವ ಹೇಳಿದ್ದೇನು…?

ಸೊಸೆಗೆ ನಾಟಿ ಕೋಳಿ, ರೊಟ್ಟಿ ಇಷ್ಟ ; ಸೋಫಿಯಾ ಮಾವ ಹೇಳಿದ್ದೇನು…?

ಬೆಳಗಾವಿ : ಆಪರೇಷನ್ ಸಿಂಧೂರ ದಾಳಿ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಹೊಣೆ ಹೊತ್ತಿರುವ ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿ ಸೊಸೆ, ಇನ್ನೂ ಸೊಸೆಗೆ ಏನೆಲ್ಲ ಇಷ್ಟ ಎಂಬುದನ್ನು ಅವರ ಮಾವ ಗೌಸಸಾಬ್ ಹೇಳಿದ್ದಾರೆ.

2016 ರಲ್ಲಿ ಪುಣೆಯಲ್ಲಿ ನಡೆದ ಮಿಲಿಟರಿ ಕವಾಯತಿನಲ್ಲಿ ಭಾರತೀಯ ಸೇನಾ ತುಕಡಿ ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಇವರ ಪತಿ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ತಾಜುದ್ದೀನ್ ಬಾಗೇವಾಡಿ ಅವರೂ ಕೂಡಾ ಸೈನ್ಯದಲ್ಲಿ ಇದ್ದು ಪತ್ನಿಯಂತೆ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.

ಸೊಸೆ ಕುರಿತು ಅವರ ಮಾವ ಗೌಸಸಾಬ ಬಾಗೇವಾಡಿ ಮಾತನಾಡಿದ್ದು, ಸೊಸೆ ಮಗ ಮನೆಗೆ ಬಂದಾಗ ಬಹಳ ಲವಲವಿಕೆಯಿಂದ ನಮ್ಮೊಂದಿಗೆ ಕಾಲ ಕಳೆಯುತ್ತಾರೆ. ನನ್ನ ಸೊಸೆಗೆ ಜವಾರಿ (ನಾಟಿ) ಕೋಳಿ, ರೊಟ್ಟಿ, ಕಬ್ಬು ಅಂದರೆ ಪಂಚಪ್ರಾಣ.

ನಿಮ್ಮೂರು ಚಲೋ ಐತಿ, ನಮ್ದು ಗೋದಿ ನಾಡು, ನಿಮ್ಮೂರು ನಾಚುರಲ್ ಇದೆ ಅಂತಾ ಸೊಸೆ ನಮ್ಮ ಊರಿನ ಬಗ್ಗೆ ಹೊಗಳುತ್ತಾಳೆ. ಅಲ್ಲದೇ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ನೀವು ವಾಕಿಂಗ್ ಮಾಡಿ ಸಲಹೆ ನೀಡುತ್ತಾಳೆ ಎಂದರು.

ಸೋಫಿಯಾ ಖುರೇಷಿ ಮೂಲತಃ ಗುಜರಾತ್ ರಾಜ್ಯದ ವಡೋದರ 1981 ರಲ್ಲಿ ಜನಿಸಿದ್ದಾರೆ. ಸೈನಿಕ‌ ಕುಟುಂಬಕ್ಕೆ ಸೇರಿರುವ ಇವರ ತಂದೆ ಹಾಗೂ ಅಜ್ಜ ಇಬ್ಬರು ಭಾರತೀಯ ಸೇನೆಯಲ್ಲಿದ್ದರು.

ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಸಧ್ಯ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.‌ ಇವರ ಪತಿ ತಾಜುದ್ದೀನ್ ಬಾಗೇವಾಡಿ ಅವರೂ ಜಾನ್ಸಿಯಲ್ಲಿ ಕರ್ನಲ್ ಆಗಿ ದೇಶಸೇವೆ ಮಾಡುತ್ತಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!