ದ್ವಿತೀಯ ಪಿಯುಸಿ ಮರು ಮೌಲ್ಯ ಮಾಪನದಲ್ಲಿ 96.50 ಪ್ರತಿಶತ ಅಂಕದೊಂದಿಗೆ ಗೌರಿ ತೇರ್ಗಡೆ
ಬೆಳಗಾವಿ : ನಗರದ ಲಿಂಗರಾಜ ಕಾಲೇಜಿನ ವಿಧ್ಯಾರ್ಥಿನಿ ಗೌರಿ ಶಶಿಕಾಂತ ಯಾದಗುಡೆ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯ ಮಾಪನದಲ್ಲಿ ಎಂಟು ಅಧಿಕ ಅಂಕಗಳೊಂದಿಗೆ 96.50 ಪ್ರತಿಶತ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಗೌರಿ ಯಾದಗುಡೆ 600 ಕ್ಕೆ 571 ಅಂಕಗಳನ್ನು ಪಡೆದಿದ್ದಳು. ವ್ಯವಹಾರ ಅಧ್ಯಯನ ವಿಷಯದಲ್ಲಿ 86 ಅಂಕ ಬಂದಿದ್ದವು. ಇದೇ ವಿಷಯದ ಮರು ಮೌಲ್ಯ ಮಾಪನಕ್ಕಾಗಿ ಅರ್ಜಿ ಸಲ್ಲಿಸಿದ್ದ ಇವರು ಸಧ್ಯ 8 ಅಂಕ ಹೆಚ್ಚುವರಿ ಪಡೆದು 94 ಅಂಕಗಳನ್ನು ವ್ಯವಹಾರ ಅಧ್ಯಯನ ವಿಷಯದಲ್ಲಿ ಪಡೆದಿದ್ದಾರೆ.
ವಿದ್ಯಾರ್ಧಿನಿ ಗೌರಿ ಯಾದಗುಡೆ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ತಂದೆ-ತಾಯಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

