Select Page

Advertisement

ಜನಿವಾರ ವಿವಾದ ; ಬೆಳಗಾವಿಯಲ್ಲಿ ಸಿಡಿದೆದ್ದ ಬ್ರಾಹ್ಮಣ ಸಮುದಾಯ

ಜನಿವಾರ ವಿವಾದ ; ಬೆಳಗಾವಿಯಲ್ಲಿ ಸಿಡಿದೆದ್ದ ಬ್ರಾಹ್ಮಣ ಸಮುದಾಯ

ಬೆಳಗಾವಿ : ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿ ಜನಿವಾರ ಕಳಚಿದ ಪ್ರಕರಣ ಖಂಡಿಸಿ ಗಡಿನಾಡ ಬೆಳಗಾವಿಯಲ್ಲಿ ಸೋಮವಾರದಂದು ಬ್ರಾಹ್ಮಣರು ಶಕ್ತಿ ಪ್ರದರ್ಶನ ನಡೆಸಿದರು.

ಜನಿವಾರ ಕತ್ತರಿಸಿದವರನ್ನು ಕೇವಲ ಅಮಾನತು ಮಾಡುವುದು ಅಷ್ಟೇ ಅಲ್ಲ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎನ್ನುವ ಕೂಗು ಕೇಳಿ ಬಂದಿತು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಬ್ರಾಹ್ಮಣ ಸಮಾಜದ ಮುಖಂಡ ಅನಿಲ ಪೋತದಾರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.

ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸೇರಿದ ಬ್ರಾಹ್ಮಣ ಸಮಾಜದವರು ಜನಿವಾರ ಕತ್ತರಿಸಿ ವಿಕೃತಿ ಮೆರೆದವರ ವಿರುದ್ಧ ಆಕ್ರೋಶ ವ್ತಕ್ತಪಡಿಸಿದರು. ಅಷ್ಟೇ ಅಲ್ಲ ಇದೇ ರೀತಿ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಬ್ರಾಹ್ಮಣರು ಪರಶುರಾಮನ ಅವತಾರ ತಾಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಜನಿವಾರಕ್ಕೆ ಕೈ ಹಚ್ಚಿದರೆ ತಲವಾರ ತೆಗೆಯಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಮಾತುಗಳನ್ನು ಕೆಲವರು ಆಡಿದರು.

ಸಂಸ್ಕೃತಿಯ ಸಂಕೇತವೂ, ಧರ್ಮದ ಪವಿತ್ರವೂ ಆಗಿರುವ ಜನಿವಾರವನ್ನು ಪ್ರದಶರ್ಿಸಿ ಬ್ರಾಹ್ಮಣ ಸಮುದಾಯವರು ಪ್ರತಿಭಟಿಸಿದರು. ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಬ್ರಾಹ್ಮಣ ಸಮಾಜದವರು ಕೈಯಲ್ಲಿ ಜನಿವಾರ ಹಿಡಿದುಕೊಂಡು “ಜನಿವಾರ ಉಳಿಸಿ, ಬ್ರಾಹ್ಮಣ್ಯ ಬೆಳೆಸಿ” ಎಂಬ ಫಲಕ ಹಿಡಿದು ಪ್ರತಿಭಟಿಸಿದರು. ಪ್ರತಿಭಟನಾನಿರತ ಓರ್ವ ವ್ಯಕ್ತಿ ರಸ್ತೆ ಮೇಲೆ ಹೊರಳಾಡಿದರು. ಕೆಲಕಾಲ ಮಾನವ ಸರಪಳಿ ನಿಮರ್ಿಸಿದರು. ಹಿಂದೂ ವಿರೋಧಿ ಸಕರ್ಾರ ಎಂದು ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಬ್ರಾಹ್ಮಣ ಸಮಾಜ ಜನಿವಾರ ತೆಗೆಸಿದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಬ್ರಾಹ್ಮಣ ಸಮಾಜದ ಬೃಹತ್ ಪ್ರತಿಭಟನೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಭಾಗವಹಿಸಿ ರಾಜ್ಯ ಸಕಕಾರದ ವಿರುದ್ಧ ಕಿಡಿಕಾರಿದರು.


Advertisement

Leave a reply

Your email address will not be published. Required fields are marked *

error: Content is protected !!