
ಶೌಚಾಲಯದಲ್ಲಿ ಕಾಂಗ್ರೆಸ್ ನಾಯಕರ ಪೋಟೋ ; ಸಾರ್ವಜನಿಕರ ಆಕ್ರೋಶ

ಬೆಳಗಾವಿ : ಮೋಬೈಲ್ ಶೌಚಾಲಯಕ್ಕೆ ಮಹಾನ್ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರ ಭಾವಚಿತ್ರ ಹೊಂದಿದ್ದ ಬ್ಯಾನರ್ ಗಳನ್ನು ಪರದೆಯಾಗಿ ಅಳವಡಿಸಿ ಅಪಮಾನ ಮಾಡಿರುವ ಆರೋಪ ಕೇಳಿಬಂದಿದೆ.
ಬೆಳಗಾವಿ ತಾಲೂಕಿನ ಆನಗೋಳದ ಅಂಬೇಡ್ಕರ್ ಗಲ್ಲಿಯ ಎಸ್ ಕೆಇ ಸೊಸೈಟಿ ಗ್ರೌಂಡ್ ನಲ್ಲಿ ಘಟನೆ ನಡೆದಿದೆ.
ನಗರದ ಹೊರವಲಯದಲ್ಲಿ ಸಂತ ಪಾರಾಯಣ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಬರೋ ಜನರಿಗೆ ಅಂಬೇಡ್ಕರ್ ಗಲ್ಲಿಯ ಸ್ಮಶಾನದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ತಾತ್ಕಾಲಿಕವಾಗಿ ನಿರ್ಮಾಣಗೊಂಡ ಮೊಬೈಲ್ ಶೌಚಾಲಯಕ್ಕೆ ಸುತ್ತಲಿನ ಪರದೆಗೆ ಮಹನೀಯರ ಭಾವಚಿತ್ರ ಅಳವಡಿಸಿ ಅಪಮಾನ ಮಾಡಲಾಗಿದೆ.
ಮೊಬೈಲ್ ಶೌಚಾಲಯಕ್ಕೆ ಗಾಂಧಿ ಅಧಿವೇಶನದ ಶತಮಾನೋತ್ಸವದ ಅಂಬೇಡ್ಕರ್ ಬ್ಯಾನರ್ ಅಳವಡಿಕೆಗೆ ದಲಿತ ಸಮುದಾಯದ ಯುವಕರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸರು ಭೇಟಿನೀಡಿ ಶೌಚಾಲಯ ತೆರವು ಮಾಡಿದ್ದಾರೆ. ಟಿಳಕವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.