Belagavi : ಬಾಲಕಿಗೆ ಲೈಂಗಿಕ ದೌರ್ಜನ್ಯ ; 68 ವರ್ಷದ ವೃದ್ಧನಿಗೆ 20 ವರ್ಷ ಜೈಲುಶಿಕ್ಷೆ
ಬೆಳಗಾವಿ : ನಾಲ್ಕು ವರ್ಷದ ಬಾಲಕಿಗೆ ಸಿಹಿ ತಿನಿಸು ಕೊಟ್ಟು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವಿಧಿಸಿ ಪೋಕ್ಸೊ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ನಂದಗಡದ ಕಾಕರಗಲ್ಲಿಯ ಆರೋಪಿ ನಿಸಾರಅಹ್ಮದ್ ಫಕ್ರುಸಾಬ್ ಚಾಪ್ಗಾವಿ (68) ಎಂಬಾತ ಕಳೆದ 2024 ರ ಫೆಬ್ರವರಿಯಲ್ಲಿ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ವರ್ಷದ ಬಾಲಕಿಗೆ ಸಿಹಿ ತಿನಿಸು ಕೊಟ್ಟು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶೆ ಸಿ ಎಮ್ ಪುಷ್ಪಲತಾ ಅವರಿದ್ದ ಪೀಠ ಪ್ರಕರಣ ವಿಚಾರಣೆ ನಡೆಸಿ ಆರೋಪಿಗೆ 20 ವರ್ಷ ಸೆರೆಮನೆ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡವಿಧಿಸಿದೆ.
ಈ ಪ್ರಕರಣ ಕುರಿತು ನಂದಗಡ ಪೊಲೀಸ್ ಠಾಣೆ ಇನ್ಸ್ಪೆಕ್ಟರ ಸ್ ಸಿ ಪಾಟೀಲ್ ಪೋಕ್ಸೊ ನ್ಯಾಯಾಲಯಕ್ಕೆ ದೋಷಾರೋಪಣೆ ವರದಿ ಸಲ್ಲಿಸಿದ್ದರು, ಸರಕಾರಿ ಅಭಿಯೋಜಕರಾಗಿ ಎಲ್ ವಿ ಪಾಟೀಲ್ ವಾದ ಮಂಡಿಸಿದ್ದರು.


