ನದಿಯಲ್ಲಿ ಯುವಕನ ಶವ ಪತ್ತೆ ; ಕೊಲೆ ಶಂಕೆ
ಬೈಲಹೊಂಗಲ : ಮಲಪ್ರಭಾ ನದಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ತಾಲೂಕಿನ ನಯಾನಗರದಲ್ಲಿ ನಡೆದಿದೆ.
ತಾಲೂಕಿನ ದೇವಲಾಪುರ ಗ್ರಾಮದ ಸಾಗರ ದುಂಡಪ್ಪ ಅಂಬರಶೆಟ್ಟಿ (28) ಮೃತ ವ್ಯಕ್ತಿ. ಕುತ್ತಿಗೆಗೆ ಸೆಣಬಿನ ಹಗ್ಗದಿಂದ ಬಿಗಿದಿದ್ದು ಕೊಲೆ ಮಾಡಿ ನದಿಗೆ ಎಸೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ಯುವಕ ಕಳೆದ ಫೆ. 20 ರಂದು ಸ್ನೇಹಿತರಿಗೆ ಕರೆ ಮಾಡಿ ಯಾರೋ ಅಪರಿಚಿತರು ನನ್ನನ್ನು ಅಡ್ಡಗಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಕುಟುಂಬದವರು ಸ್ಥಳಕ್ಕೆ ಬಂದಾಗ ಮೋಬೈಲ್ ಬಂದ್ ಆಗಿದ್ದು ವ್ಯಕ್ತಿ ಸಂಪರ್ಕ ಕಳೆದುಕೊಂಡಿದ್ದ.
ಕಳೆದ ಮೂರು ದಿನಗಳಿಂದ ಮೃತದೇಹದ ಹುಡುಕಾಟ ನಡೆದಿತ್ತು. ಶನಿವಾರ ಮೃತದೇಹ ಪತ್ತೆಯಾಗದೆ. ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆ ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್ಐ ಎಫ್. ವೈ ಮಲ್ಲೂರ ಭೇಟಿನೀಡಿ ಪರಿಶೀಲನೆ ನಡೆಸಿದರು.


