ಯಾತ್ರೆಗೆ ಹೋಗಿದ್ದವರು ಮಸಣಕ್ಕೆ ; ಬೆಳಗಾವಿಗೆ ಯಾಕಿಷ್ಟು ನೋವು….?
ಕೇವಲ ಹದಿನೈದು ದಿನದ ಅಂತರದಲ್ಲಿ ಮಹಾಕುಂಭಮೇಳಕ್ಕೆ ತೆರಳಿದ್ದ ಬೆಳಗಾವಿಯ 8 ಜನ ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡ ಎರಡು ಘಟನೆಗಳು ಜಿಲ್ಲೆಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಹೌದು ಮೌನಿ ಅಮವಾಸ್ಯೆಯಂದು ಪ್ರಯಾಗರಾಜ್ ಕುಂಭಮೇಳದಲ್ಲಿ ಜರುಗಿದ ಪವಿತ್ರ ಸ್ನಾನದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇನ್ನೊಂದು ದುರ್ಘಟನೆ ಸಂಭವಿಸಿದ್ದು ಕುಂಭಮೇಳಕ್ಕೆ ತೆರಳಿ ವಾಪಸ್ ಬರುವ ವೇಳೆ ಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, 17 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದರ್ಶನ ಪಡೆದು ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಇಂದೋರ್ ಜಿಲ್ಲೆಯ ಮನ್ಪುರ್ ಬಳಿ ಬೆಳಗಾವಿಯಿಂದ ತೆರಳಿದ್ದ ಟಿಟಿ ವಾಹನ ಹಾಗೂ ಬೈಕ್ ಸೇರಿ ಟ್ರಕ್ ಗೆ ಡಿಕ್ಕಿ ಹೊಡೆದಿದಿದೆ.
ಈ ದುರ್ಘಟನೆಯಲ್ಲಿ ಬೆಳಗಾವಿಯ ಕ್ರಾಂತಿನಗರದ ನಿತಾ ಬಡಮಂಜಿ (45), ಬಸವನಗಲ್ಲಿಯ ಸಾಗರ್ ಶಾಪುರಕರ್ (55), ಜ್ಯೋತಿ ಖಂಡೇಕರ್, ಹಾಗೂ ಶಿವಾಜಿನಗರದ ಸಂಗೀತಾ ಎಂಬುವವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಪದೇ, ಪದೇ ಬೆಳಗಾವಿ ಯಾತ್ರಾರ್ಥಿಗಳು ದುರ್ಘಟನೆಯಲ್ಲಿ ಸಿಲುಕಿ ಸಂಕಷ್ಟಕ್ಕೆ ಸಿಲುಕಿದ್ದು ತುಂಬಾ ನೋವಿನ ಸಂಗತಿಯಾಗಿದೆ. ಈ ರೀತಿಯ ಘಟನೆಗಳು ಜಿಲ್ಲೆಯ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.


