Select Page

Advertisement

ಹುಡುಗಿಯರೇ ಹುಷಾರ್ ; ಯಾಮಾರಿದ್ರೆ ಬೆತ್ತಲೆ ಮಾಡುತ್ತೆ ಈ ಗ್ಯಾಂಗ್….!

ಹುಡುಗಿಯರೇ ಹುಷಾರ್ ; ಯಾಮಾರಿದ್ರೆ ಬೆತ್ತಲೆ ಮಾಡುತ್ತೆ ಈ ಗ್ಯಾಂಗ್….!

ಬೆಳಗಾವಿ : ಮುಂಬೈ ಕ್ರೈಂ ಬ್ರ್ಯಾಂಚ್, ಐಬಿ ( ಇಂಟಲಿಜೆನ್ಸ್ ಬ್ಯೂರೊ ) ಹೆಸರು ಹೇಳಿಕೊಂಡು ಕರೆ ಮಾಡುವ ಖದೀಮರು ನಿಮ್ಮನ್ನು ಬೆತ್ತಲು ಮಾಡಿ ಹಣಕ್ಕೆ ಭೇಡಿಕೆ ಇಡುವ ಗ್ಯಾಂಗ್ ಸಕ್ರಿಯವಾಗಿದ್ದು ಇದಕ್ಕೆ ಮಹಿಳೆಯರು ಎಚ್ಚರಿಕೆ ವಹಿಸುವ
ಅವಶ್ಯಕತೆ ಇದೆ.

ಕ್ರೈಮ್ ಬ್ರ್ಯಾಂಚ್ ಹೆಸರು ಹೇಳಿಕೊಂಡು‌ ಇವರು ಮಹಿಳೆಯರಿಗೆ ಕರೆ ಮಾಡುತ್ತಾರೆ. ದೇಶದ ಆಂತರಿಕ ಭದ್ರತೆ, ನಾವು ಒಂದು ದೊಡ್ಡ ಜಾಲದ ಬೆನ್ನು ಬಿದ್ದಿದ್ದೇವೆ ಎಂದು ಹೇಳುವ ಇವರು ಖಾಸಗಿ ವಿಚಾರ ತಿಳಿದುಕೊಳ್ಳುತ್ತಾರೆ. ಪದೇ, ಪದೇ ಸರ್ಕಾರಿ ಇಲಾಖೆಗಳ ಹೆಸರು ಹೇಳುತ್ತಾ ಹೆಸರಿಸುತ್ತಾರೆ.

ನಿಮ್ಮಿಂದ ಒಂದು ಅಪರಾಧ ಕೃತ್ಯ ನಡೆದಿದೆ ಎಂದು ಕಥೆ ಕಟ್ಟುತ್ತಾ ಸಾಗುವ ಇವರು ಸಾಧ್ಯವಾದಷ್ಟು ಕುಟುಂಬದ ಸಂಪರ್ಕದಿಂದ ದೂರ ಮಾಡಿಸುತ್ತಾರೆ. ನಂತರ ಯುವತಿಯರ ವೈಯಕ್ತಿಕ ದಾಳಲೆ ಕಲೆ ಹಾಕುತ್ತಾರೆ. ‌ಇದಾದ‌ ನಂತರ ಇವರ ಅಸಲಿ ಆಟ ನಡೆಯುತ್ತದೆ.

ಮಹಿಳೆಯರನ್ನು ಮಾನಸಿಕವಾಗಿ ಹೆಸರಿಸಿದ ನಂತರ ಅವರ ದೇಹದ ತಪಾಸಣೆ ಎಂದು ಮೈ ಮೇಲಿನ ಬಟ್ಟೆ ಬಿಚ್ಚುವ ಕೆಲಸ ಮಾಡಿಸುತ್ತಾರೆ. ವೀಡಿಯೋ ಕರೆಯಲ್ಲಿ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡ ನಂತರ ಖದೀಮರು ಕರೆ ಕಟ್ ಮಾಡುತ್ತಾರೆ.

ಇದಾದ ನಂತರ ಇವರು ಬೆತ್ತಲೆ ವೀಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೆ. ಇಲ್ಲವಾದರೆ ಈ ವೀಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಮಾಡುತ್ತಾರೆ. ಇದರಿಂದ‌ ಯುವತಿಯರು ಹೆದರಿ ಹಣ ಕೊಡುವ ಪರಿಸ್ಥಿತಿ ಬರುತ್ತಿದೆ.

ಇದೇ ರೀತಿ ಸುಳ್ಳು ಆರೋಪ ಮಾಡಿ ತನಿಖಾ ಸಂಸ್ಥೆಗಳ ಹೆಸರು ಹೇಳಿ ಆ ರೀತಿಯ ಕರೆ ಬಂದರೇ ಹತ್ತಿರ ಪೊಲೀಸ್ ಠಾಣೆ ಸಂಪರ್ಕಿಸಬೇಕು ಹಾಗೂ ಅವರಿಗೆ ಯಾವುದೇ ವೈಯಕ್ತಿಕ ದಾಖಲೆ ನೀಡಬಾರದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಡಾ ಮಾರ್ಟಿನ್ ಅವರು ತಿಳಿಸಿದ್ದಾರೆ.


ಇದೇ ರೀತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಅಂಜಲಿ ಪಾಟೀಲ್ ಅವರಿಗೆ ಖದೀಮರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಿಮ್ಮ ಹೆಸರಿನ ಒಂದು ಪಾರ್ಸಲ್ ನಲ್ಲಿ ಡ್ರಗ್ಸ್ ಸಿಕ್ಕಿದೆ‌. ತೈವಾನ್ ಗೆ ಕಳುಹಿಸಲಾಗುತ್ತಿದೆ. ನೀವು ಈ ಕುರಿತು ‌ಮುಂಬೈ ಸೈಬರ್ ಕ್ರೈಮ್ ಬ್ರ್ಯಾಂಚ್ ಗೆ ಸಂಪರ್ಕ ಮಾಡುವಂತೆ ಹೇಳಿ 5.79 ಲಕ್ಷ ಹಣಕ್ಕೆ ಭೇಡಿಕೆ ಇಡಲಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!