ಚಿಕ್ಕೋಡಿ : ಗಣೇಶೋತ್ಸವ ಹಬ್ಬದಂದು ಪಟಾಕಿ ಸಿಡಿಸುವ ವಿಚಾರದಲ್ಲಿ ಎರಡು ಗುಂಪುಗಳ‌ ನಡುವೆ ವಾಗ್ವಾದ ನಡೆದು ಹೊಡೆದಾಟ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪ್ರತ್ಯೇಕ ಗಣೇಶ ಯುವಕ‌ ಮಂಡಳದ ಯುವಕರ ನಡುವೆ ಹೊಡೆದಾಟ ನಡೆದ.‌

ಪಟಾಕಿ ಸಿಡಿಸುವ ವಿಚಾರವಾಗಿ ನಡೆದ ವಾಗ್ವಾದ ಮುಂದುವರಿದು ಹೊಡೆದಾಡುವ ಮಟ್ಟಿಗೆ ಹೋಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ‌.