ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಸಾಹೇಬ್ರ ಗಣೇಶ ಹಬ್ಬದ ಸಡಗರ ನೋಡಿ
ಬೆಳಗಾವಿ : ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ಮಾಡಿ, ಗಣೇಶ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆರಾಧಿಸುವ ದೃಶ್ಯ ಕಂಡುಬಂದಿದ್ದು ಬೆಳಗಾವಿ ಡಿಸಿ ಮಹ್ಮದ್ ರೋಷನ್ ಅವರ ಮನೆಯಲ್ಲಿ.
ಬೆಳಗಾವಿಯ ಚನ್ನಮ್ಮನ ವೃತ್ತದಲ್ಕಿರುವ ಗಣಪತಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳು ಪತ್ನಿ ಅಂಕಿತಾ ಹಾಗು ಪುತ್ರ ಅಯಾನ್ ಜೊತೆ ಆಗಮಿಸಿ ತಾವೇ ಖುದ್ದಾಗಿ ಗಣೇಶ ಮೂರ್ತಿಗೆ ಆರತಿ ಬೆಳಗಿ ಪೂಜೆ ನೆರವೇರಿಸಿ ಗಣೇಶ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ತಮ್ಮ ಸರ್ಕಾರಿ ಬಂಗಲೆಗೆ ತೆಗೆದುಕೊಂಡು ಹೋದರು.
ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದ್ದಾರೆ.
ಇದು ಭಾರತ,ವಿವಿಧತೆಯಲ್ಲಿ ಏಕತೆ ಸಾರುವ ಅನೇಕ ಧರ್ಮೀಯರು ವಾಸ ಮಾಡುವ ಹೆಮ್ಮೆಯ ಭಾರತ ನಮ್ಮದು, ನಮ್ಮ ದೇಶದಲ್ಲಿ ಸಹೋದರತ್ವ,ಸಾಮರಸ್ಯ,ಬಾಂಧವ್ಯ ಇನ್ನುವರೆಗೆ ಜೀವಂತವಾಗಿವೆ ಹೀಗಾಗಿ ಈ ಬಾಂಧವ್ಯ ಸೂರ್ಯಚಂದ್ರ ಇರೋವರೆಗೂ ಜೀವಂತವಾಗಿರುತ್ತದೆ ಎನ್ನುವದಕ್ಕೆ ಬೆಳಗಾವಿ ಡಿಸಿ ಮಹ್ಮದ್ ರೋಷನ್ ಅವರ ಕೋಮುಸೌಹಾರ್ದತೆಯ ಸಂದೇಶವೇ ಇದಕ್ಕೆ ಸಾಕ್ಷಿ…


