ಹುಣಸೆ ಬೀಜದಿಂದ ತಯಾರಾದ 8 ಅಡಿ ಎತ್ತರದ ಗಣೇಶ ಮೂರ್ತಿ
ಬೆಳಗಾವಿ : ಸಾಮಾನ್ಯವಾಗಿ ಗಣೇಶ ಮೂರ್ತಿಗಳನ್ನು ಮಣ್ಣು ಅಥವಾ ಪಿಒಪಿ ನಲ್ಲಿ ತಯಾರಿಸುವುದು ಸರ್ವೇ ಸಾಮಾನ್ಯ. ಆದರೆ ಬೆಳಗಾವಿಯಲ್ಲಿ ಹುಣಸೆ ಬೀಜ ಬಳಸಿ ಸುಮಾರು 8 ಅಡಿ ಎತ್ತರದ ಗಣೇಶ ಮೂರ್ತಿ ತಯಾರಿಸಲಾಗಿದೆ.
ಬೆಳಗಾವಿಯ ಮಾಳಿಗಲ್ಲಿಯಲ್ಲಿನ ಓಣಿಯಲ್ಲಿ ಪ್ರತಿಷ್ಠಾಪಿಸಲಾದ ಈ ಹುಣಸೆ ಬೀಜದ ಗಣೇಶ ಮೂರ್ತಿಗಳನ್ನು ಸುನೀಲ್ ಆನಂದಾಚೆ ಅವರು ತಯಾರಿಸಿದ್ದಾರೆ. ಪರಿಸರಸ್ನೇಹಿ ಗಣೇಶ ಹಬ್ಬದ ಆಚರಣೆ ಉದ್ದೇಶದಿಂದ ಈ ಕೆಲಸ ಮಾಡಿದ್ದಾರೆ.
2 ಲಕ್ಷ 21 ಸಾವಿರದ 111 ಹುಣಸೆ ಬೀಜಗಳನ್ನು ಬಳಸಿಕೊಂಡು ಈ ಗಣೇಶ ಮೂರ್ತಿ ತಯಾರಿಸಿಲಾಗಿದೆ. ಒಟ್ಟು
35 ಸಾವಿರ ರೂ. ಖರ್ಚಾಗಿದೆ. 8 ಅಡಿ ಉದ್ದ ಹಾಗೂ 4 ಅಡಿ ಅಗಲದ ಗಣೇಶ ಮೂರ್ತಿ ನಿರ್ಮಾಣ ಮಾಡಲಾಗಿದೆ.
ದಿನಪತ್ರಿಕೆಗಳು, ಹುಲ್ಲು ಹಾಗೂ ಹುಣಸೆ ಬೀಜಗಳನ್ನು ಉಪಯೋಗಿಸಿ 8 ಅಡಿ ಎತ್ತರದ ಸುಂದರ ಗಣೇಶ ಮೂರ್ತಿ ನಿರ್ಮಿಸಿದ್ದಾರೆ. ಪ್ರಕೃತಿಗೆ ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಈ ಮೂರ್ತಿ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಸುನೀಲ್.


