Select Page

Advertisement

ಬೆಳಗಾವಿ : ಕಟ್ಕೊಂಡ್ ಹೆಂಡತಿಯನ್ನು ಹೊಡೆದ ಪೊಲೀಸಪ್ಪ ; ಒಂದು ಶೆಡ್ಡಿನ ಕಥೆ ಇದು..!

ಬೆಳಗಾವಿ : ಕಟ್ಕೊಂಡ್ ಹೆಂಡತಿಯನ್ನು ಹೊಡೆದ ಪೊಲೀಸಪ್ಪ ; ಒಂದು ಶೆಡ್ಡಿನ ಕಥೆ ಇದು..!

ಬೆಳಗಾವಿ : ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ದರ್ಶನ್ ಗ್ಯಾಂಗ್ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆಯ ಸುದ್ದಿ ಬಿಸಿಯಾಗಿರುವಾಗಲೇ ಜನರಿಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸಪ್ಪ ಮದುವೆಯಾದ ಹೆಂಡತಿಯ ಶೀಲ ಶಂಕಿಸಿ ಶೆಡ್‌ನಲ್ಲಿ ಕೂಡಿಟ್ಟು ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ, ಮನಸೋ ಇಚ್ಚೆ ಮೈಮೇಲೆ ಬರೆ ಏಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಪೊಲೀಸ್ ಪದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಂಡತಿಗೆ ಕಳೆದ ಎರಡು ತಿಂಗಳಿನಿಂದ ತನ್ನ ಪತ್ನಿಯ ಶೀಲ ಶಂಕಿಸಿ ಶೆಡ್‌ನಲ್ಲಿ ಕೂಡಿಟ್ಟು ಹಲ್ಲೆ ಮಾಡಿ ಬರೆ ಹಾಕಿದ್ದಾನೆ ಎಂದು ಪೊಲೀಸಪ್ಪನ ಪತ್ನಿ ಪ್ರತಿಮಾ ಯಲ್ಲಪ್ಪ ಅಸಗೆ ಆರೋಪಿಸಿದ್ದಾಳೆ.

ರಾಯಬಾಗ ತಾಲೂಕಿನ ನಿಡಗುಂಡಿ ಗ್ರಾಮದ ಪ್ರೀಯಾಂಕಾಗೆ ಅಥಣಿ ತಾಲೂಕಿನ ಕುನ್ನಾಳ ಗ್ರಾಮದ ಯಲ್ಲಪ್ಪ ಅಗಸೆಗೆ ಕಳೆದ 10 ವರ್ಷಗಳ ಹಿಂದೆಯೇ ಮದುವೆ ಮಾಡಿಕೊಡಲಾಗಿದೆ. ಸದ್ಯ ಯಲ್ಲಪ್ಪ ವಿಜಯಪುರ ತಾಲೂಕಿನ ತಿಕೋಟಾದಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾನೆ.

ಇವರಿಗೆ ಮೂವರು ಮಕ್ಕಳಿದ್ದರೂ ಪತ್ನಿಯ ಶೀಲದ ಮೇಲೆ ಶಂಕೆ ಮಾಡಿ ಶೆಡ್‌ನಲ್ಲಿ ಕೂಡಿ ಹಾಕಿ ಮನಸೋ ಇಚ್ಚೆ ಹಲ್ಲೆ ಮಾಡಿ ಬರೆ ಹಾಕಿದ್ದಾನೆ. ನನ್ನ ಪತಿ ಮಾತ್ರ ನನ್ನ ಮೇಲೆ ಹಲ್ಲೆ ಮಾಡಿಲ್ಲ. ಬದಲಾಗಿ ಅವನ ಅಕ್ಕ, ತಂಗಿಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುದ್ದಿಗಾರರ ಮುಂದೆ ಆರೋಪಿಸಿದ್ದಾಳೆ.

ನನ್ನ ತವರು ಮನೆಯವರು ನನಗೆ ನೋಡಲು ಬಂದಾಗ ಅವರಿಗೂ ಸಹ ನನ್ನ ಪತಿ ಬೇದರಿಕೆ ಹಾಕಿದ್ದಲ್ಲದೆ, ನಿಮ್ಮ ಮಗಳು ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ದೂರು ಕೊಟ್ಟು ನಿಮ್ಮ ಮೇಲೆಯೇ ಕೇಸ್ ದಾಖಲಿಸುತ್ತೇನೆ ಎಂದು ಬೇದರಿಕೆ ಹಾಕಿದ್ದಾನೆ.

ಶೆಡ್‌ನಲ್ಲಿ ಯಾರೂ ಇಲ್ಲದ ವೇಳೆ ತಪ್ಪಿಸಿಕೊಂಡು ಬಂದು ಬೆಳಗಾವಿಯ ಮಹಿಳಾ ಸಂಘದ ಸಹಾಯದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಳೆ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರನ್ನು ಭೇಟಿಯಾಗಿ ನನ್ನ ಪತಿಯ ಮೇಲೆ ದೂರು ಕೊಡುವುದಾಗಿ ಪ್ರತಿಮಾ ಸುದ್ದಿಗಾರರ ಮುಂದೆ ತಿಳಿಸಿದ್ದಾಳೆ.

Advertisement

Leave a reply

Your email address will not be published. Required fields are marked *

error: Content is protected !!