Select Page

Advertisement

ಬೆಳಗಾವಿ : ಗಂಡನನ್ನು ಕೊಂದಿದ್ದ ಪತ್ನಿ ಹಾಗೂ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ : ಗಂಡನನ್ನು ಕೊಂದಿದ್ದ ಪತ್ನಿ ಹಾಗೂ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಭೀಮನ ಅಮವಾಸ್ಯೆ ಹಿನ್ನಲೆಯಲ್ಲಿ ಹೆಂಡತಿ ಮನೆಯಲ್ಲಿ ಗಂಡನ ಪಾದ ಪೂಜೆ ಮಾಡಿ, ದೇವಸ್ಥಾನಕ್ಕೆ ಕರೆತಂದು ಕೊಲೆ ಮಾಡಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.

12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗೋಕಾಕ ನ್ಯಾಯಾಲಯದಲ್ಲಿ, ಸದರಿ ಇಬ್ಬರೂ ಆರೋಪಿತರಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 3 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದು ಇರುತ್ತದೆ.

ತಾಲೂಕಿನ ವಡೇರಹಟ್ಟಿ ಗ್ರಾಮದ ಯುವಕ ಶಂಕರ ಸಿದ್ದಪ್ಪ‌ ಜಗಮುತ್ತಿ (25) ಎಂಬಾತನನ್ನು ಪತ್ನಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಶ್ರೀಧರನ ಎಂಬಾತ ಪ್ಲ್ಯಾನ್ ಮಾಡಿ ದೇವಸ್ಥಾನದ ಮುಂದೆಯೇ ಮರ್ಡರ್ ಮಾಡಿದ್ದರು.

ಪ್ರಕರಣವನ್ನು ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಅವರು ಸಮಗ್ರ ತನಿಖೆ ಮಾಡಿ, ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ, ಅಭಿಯೋಜನೆ ಪರ ಹಾಜರುಪಡಿಸಿದ ಎಲ್ಲಾ ಸಾಕ್ಷಾಧಾರಗಳನ್ನು ಪರಿಗಣಿಸಿ, ಮಾನ್ಯ ನ್ಯಾಯಾಲಯ ಮೃತನ ಸಾವಿಗೆ ಆರೋಪಿತರೇ ಕಾರಣರು ಎಂಬ ಆರೋಪ ಸಾಭಿತಾದ ಹಿನ್ನೆಲೆ ಆರೋಪಿತರಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 3 ಲಕ್ಷ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಗೋಕಾಕ ಸರಕಾರಿ ಅಭಿಯೋಜಕ ಸುನೀಲ ಎಂ. ಹಂಜಿ ವಾದ ಮಂಡಿಸಿದರು

ಘಟನೆಯ ಹಿನ್ನೆಲೆ : ಆರೋಪಿಗಳಾದ ಶ್ರೀಧರ ಮತ್ತು ಪ್ರಿಯಾಂಕಾ ಇಬ್ಬರು ಪ್ರೀತಿಸುತ್ತಿದ್ದರು. ಆರೋಪಿಗಳಿಬ್ಬರು ಒಂದೇ ಊರಿನವರಾಗಿದ್ದು, ಆರನೇ ಕ್ಲಾಸಿನಲ್ಲಿದ್ದಾಗಲೇ ಇಬ್ಬರ ನಡುವೆ ಸ್ನೇಹ ಹುಟ್ಟಿತ್ತು. ಬಳಿಕ ಅದು ಪ್ರೇಮವಾಗಿ ಬದಲಾಗಿತ್ತು.

ಈ ನಡುವೆ ಮನೆಯವರು ಪ್ರಿಯಾಂಕಾಳ ವಿವಾಹವನ್ನು ಮೃತ ಶಂಕರ್‌ ಜತೆಗೆ ನಿರ್ಧರಿಸಿದ್ದರು. ಪ್ರಿಯಾಂಕಾಳಿಗೂ ಶ್ರೀಧರನ ಮೇಲೆ ಮನಸ್ಸಿದ್ದರೂ ಮನೆಯವರ ಮಾತನ್ನು ಮೀರಲಾಗದೆ ಮದುವೆಗೆ ಒಪ್ಪಿದ್ದಳು.

ಈ ನಡುವೆ, ಪ್ರಿಯಾಂಕಾಳನ್ನು ಮದುವೆ ಮಾಡಿಕೊಳ್ಳಬೇಡ, ಅವಳು ನನಗೆ ಬೇಕು ಎಂದು ಎಂದು ಶ್ರೀಧರ ಶಂಕರ್ ಮುಂದೆ ಮನವಿ ಮಾಡಿದ್ದ ಎನ್ನಲಾಗಿದೆ. ಆದರೆ, ಶ್ರೀಧರನ ಮಾತನ್ನು ಧಿಕ್ಕರಿಸಿ ಶಂಕರ ಪ್ರಿಯಾಂಕಾಳನ್ನು ಮದುವೆಯಾಗಿದ್ದ. ಆವತ್ತಿನಿಂದಲೇ ಶ್ರೀಧರ ಕತ್ತಿ ಮಸೆಯುತ್ತಿದ್ದ.

ಭಾನುವಾರ ಬೆಳಗ್ಗೆ 17.7.2023ರಂದು ಶಂಕರ ದೇವಸ್ಥಾನಕ್ಕೆ ಬರುವ ಸಮಯವನ್ನೇ ಕಾದು ಕುಳಿತು ಶ್ರೀಧರ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನ ಪ್ರೇಯಸಿಯನ್ನು ಮದುವೆಯಾದ ದ್ವೇಷವನ್ನು ತೀರಿಸಿಕೊಂಡಿದ್ದಾನೆ

Advertisement

Leave a reply

Your email address will not be published. Required fields are marked *

error: Content is protected !!