ರಾಜೀನಾಮೆ ಮಾತನಾಡಿದ ಕಾಂಗ್ರೆಸ್ ಶಾಸಕ ; ಕಾರಣ ಏನು ಗೊತ್ತಾ….?
ದಾವಣಗೆರೆ : ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಕೈ ಶಾಸಕ ಬಸವರಾಜ ಶಿವಗಂಗಾ ರಾಜೀನಾಮೆ ಮಾತನಾಡಿದ್ದಾರೆ. ಆದರೆ ಇದಕ್ಕೆಲ್ಲಾ ಪ್ರಮುಖವಾದ ಕಾರಣ ಸಚಿವರು ಹಾಗೂ ಅಧಿಕಾರಿಗಳ ಕಾರ್ಯವೈಖರಿ.
ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಕೇವಲ ನೂರು ದಿನ ಕಳೆಯುವ ಒಳಗೆ ಶಾಸಕರು ರಾಜೀನಾಮೆ ಮಾತನಾಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಯಾಕೆ ಇಷ್ಟು ಗೊಂದಲ ಎಂದರೆ ಇದಕ್ಕೆ ಬಲವಾದ ಕಾರಣವೂ ಇದೆ.
ಶಾಸಕ ಶಿವಗಂಗಾ ಬಸವರಾಜ್ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮಕ್ಕೆ ಧಿಡೀರ್ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಹೆದ್ದಾರಿ ಪಕ್ಕದಲ್ಲೇ ಓವರ್ ಹೆಡ್ ಟ್ಯಾಂಕರ್ ನಿರ್ಮಾಣ ಮಾಡಲಾಗುತ್ತಿತ್ತು.

ಇದನ್ನು ಗಮನಿಸಿದ್ದ ಶಾಸಕ ಶಿವಗಂಗಾ ಬಸವರಾಜ್ ಹೆದ್ದಾರಿ ಪಕ್ಕದಲ್ಲೇ ಈ ಕಾಮಗಾರಿ ಮಾಡುತಿದ್ದೀರಿ ವೈಬ್ರೇಷನ್ ಆಗಿ ಟ್ಯಾಂಕ್ ಬಿದ್ದರೆ ಏನು ಗತಿ? ಎಂತಹ ಜಾಗದಲ್ಲಿ ಕಾಮಗಾರಿ ಮಾಡಬೇಕು ಅನ್ನೋದು ಗೊತ್ತಿಲ್ವಾ? ಎಂದು ಪ್ರಶ್ನಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳಾಗಲಿ, ಸಚಿವರಾಗಲಿ ಕ್ರಮ ಕೈಗೊಂಡಿರಲಿಲ್ಲ.
ಅಧಿಕಾರಿಗಳ ಇಂತ ಕೆಲಸ ಹಾಗೂ ತಮಗೆ ಸರ್ಕಾರ ಮತ್ತು ಸಚಿವ ಸಪೋರ್ಟ್ ಇಲ್ಲದ್ದಕ್ಕೆ ಬೇಸತ್ತ ಶಿವಗಂಗಾ ಬಸವರಾಜ್ ರಾಜೀನಾಮೆ ಮಾತುಗಳನ್ನಾಡಿದ್ದಾರೆ. ಇದೆಲ್ಲವನ್ನು ನೋಡಿ ನನಗೆ ರಾಜಕೀಯ ಬೇಡ ಅನಿಸಿದೆ. ನಿಮ್ಮ ಕೆಲಸ ನೋಡಿ ರಾಜೀನಾಮೆ ಕೊಟ್ಟು ಹೊಗೋಣಾ ಎನಿಸುತ್ತಿದೆ ಎಂದಿದ್ದಾರೆ.
ನೂತನವಾಗಿ ಆಯ್ಕೆ ಆಗಿರುವ ಯುವ ಶಾಸಕ ಶಿವಗಂಗಾ ಬಸವರಾಜ್ ಅವರಿಗೆ ಸಚಿವರ-ಅಧಿಕಾರಿಗಳ ಸಪೋರ್ಟ್ ಇಲ್ಲದ್ದಕ್ಕೆ ರಾಜೀನಾಮೆ ಮಾತುಗಳನ್ನಾಡಿದ್ದಾರೆ.


